ಪ್ರಾಸಿಕ್ಯೂಶನ್ ಹಿಂಪಡೆಯಲು ಆಗ್ರಹ
ಗುಳೇದಗುಡ್ಡ,ಆ.20: ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ಅಧಿಕಾರ ಚಲಾಯಿಸಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕು. ಇಲ್ಲದಿದ್ದರೇ ರಾಜ್ಯಾದ್ಯಂತ ಹಾಲುಮತ ಕುರುಬ ಸಮಾಜ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡುತ್ತದೆ ಎಂದು ಹಾಲುಮತ ಕುರುಬ ಸಮಾಜದ ಮುಖಂಡ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಬೂದಿಹಾಳ ಎಚ್ಚರಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗದ ಏಳಿಗೆಗೆ ಶ್ರಮಿಸಿದ ನಾಯಕರಾಗಿದ್ದಾರೆ. ಹಿಂದುಳಿದ ವರ್ಗದ ಮುಖ್ಯಮಂತ್ರಿ ಅಧಿಕಾರದಲ್ಲಿರಬಾರದೆಂಬ ದುರುದ್ದೇಶದಿಂದ ಸರಕಾರ ಅಸ್ಥಿರಗೊಳಿಸಲು ಬಿಜೆಪಿ ಜೆಡಿಎಸ್ ರಾಜಕೀಯ ಕುತಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಲೆಂಕೆಪ್ಪ ಹಿರೇಕುರುಬರ, ಗ್ರಾಪಂ ಅಧ್ಯಕ್ಷ ಹನಮಗೌಡ ಹೊಸಗೌಡ್ರ, ವೈ.ಬಿ.ಗೌಡರ, ಬಸಪ್ಪ ಗೋಡಿ, ಪುರಸಭೆ ಸದಸ್ಯ ಹನಮಂತ ಗೌಡರ, ಮೂಕಪ್ಪ ಹೂನೂರ, ಆಸೆಂಗೆಪ್ಪ ಅಚನೂರ, ಮಲ್ಲನಗೌಡ ಪಾಟೀಲ, ಬಸವರಾಜ ತಿಮ್ಮನವರ, ಶಿವನಗೌಡ ಪಾಟೀಲ,ಈಶ್ವರಗೌಡ ಹೊಸಗೌಡ್ರ, ಶ್ರೀಕಾಂತ ಗಡೇದ, ಯಲಗುರೇಶ ಗೌಡರ, ನರಿಯಪ್ಪ ಉಳ್ಳಾಗಡ್ಡಿ, ನೀಲಪ್ಪ ಕೋಟೆಪ್ಪನವರ, ಮಂಜು ವಾಲಿಕಾರ ಎಚ್.ಎಸ್.ಘಂಟಿ, ಮಂಜುನಾಥ ಕುರಿ, ಭೀಮಪ್ಪ ಗೌಡರ, ಯಮನಪ್ಪ ಗಡೇದ, ವೈ.ಬಿ. ಗೌಡರ, ನಿಂಗಪ್ಪ ವಾಲೀಕಾರ, ಸುರೇಶ ಗೌಡರ, ಭರಮಪ್ಪ ನಿಂಬಲಗುಂದಿ, ದ್ಯಾವಪ್ಪ ಮಾಗಿ, ಕರಿಯಪ್ಪ ಸಿತೀಮನಿ, ಜಗದೀಶ ಘಂಟಿ ಸೇರಿದಂತೆ ಇತರರು ಇದ್ದರು.