ಮೆಟ್ರಿಕೆಯಲ್ಲಿ ಶ್ರಾವಣ ಸಂಜೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಇಲ್ಲೆಯ ಸಂಡೂರು ತಾಲೂಕಿನ ರಾಜಾಪುರದ ರಂಗ ತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ “ಶ್ರಾವಣ ಸಂಜೆ” ಕಾರ್ಯಕ್ರಮವನ್ನು ಆ 18 ರಂದು  ಸಂಜೆ  ಸಂಡೂರು ತಾಲೂಕಿನ ಮೆಟ್ರಿಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿತ್ತು.
ಕಾರ್ಯಕ್ರಮವನ್ನು ವಸತಿ ಶಾಲೆಯ ನಿಲಯ ಪಾಲಕ‌ ಗೌಡ್ರು ಕೊಟ್ರಗೌಡ  ಕಾರ್ಯಕ್ರಮ ಉದ್ಘಾಟಿಸಿ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ರಂಗ ತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ ನಿಂದ ಜಾನಪದ ಕಾರ್ಯಕ್ರಮಗಳನ್ನು ಹಳ್ಳಿ ಭಾಗದಲ್ಲಿ ಆಯೋಜಿಸಿದ್ದು ಸಂತಸ ತಂದಿದೆಂದರು.
ಅಧ್ಯಕ್ಷತೆ ವಹಿಸಿದ್ದ. ಮೊರಾರ್ಜಿ ದೇಸಾಯಿ ವಸತಿ ಶಾಲೆ. ಬನ್ನಿಹಟ್ಟಿಯ ಪ್ರಾಂಶುಪಾಲ ಬಸವರಾಜ್ ಎನ್ .ಮಾತನಾಡಿ,  ಸಂಡೂರು ತಾಲೂಕಿನ ಕೊನೆಯ ಹಳ್ಳಿಗಳಲ್ಲಿ ಇಂತಹ ಜಾನಪದ ಕಾರ್ಯಕ್ರಮಗಳು, ಜರುಗುತ್ತಿರುವುದು ಜಾನಪದ ಕಲೆ ಉಳಿವಿಗಾಗಿ ಹಳ್ಳಿ ಮಕ್ಕಳಿಗೆ ಅವಶ್ಯಕ ಎಂದರು.
 ವಿಶೇಷ ಆಹ್ವಾನಿತರಾಗಿ ಕವಿ  ಸಿಕಂದರ್ ಆಲಿ, ಹನುಮಂತಪ್ಪ,  ಇಟಗಿ ಜ್ಯೋತಿ ವೀರೇಶಪ್ಪ ಬಯಲಾಟ ಮತ್ತು ಸಂಗೀತ ಸಾಹಿತ್ಯ ಕಲಾವಿದರು ಯು.ರಾಜಾಪುರ.  ಯರ್ರಿಸ್ವಾಮಿ. ಸಂತೋಷ್ ಕುಮಾರ್ ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,  ಡಿಎಸ್ ಗಂಗಣ್ಣ ರಂಗ ತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಾರ್ಯಾಧ್ಯಕ್ಷರು . ನಟರಾಜ್ ಬಿಜಿ. ನಾಗರಾಜ್ ಲಂಬಾಣಿ  ಚಂದ್ರಶೇಖರ್ ರಂಗಕರ್ಮಿಗಳು ಬಸಾಪುರ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ  ಶ್ರೀ ಶೇಖರ್ ಬಿ ತಂಡದವರು ಜಾನಪದ ಗಾಯನ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಂಗ ತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ಡಿಜಿ ತಿರುಮಲ ವಂದನಾರ್ಪಣೆ ಮಾಡಿದರು.