ಹೆಸರು ಒಕ್ಕಲಿಗೆ ಯಂತ್ರಗಳ ಮೊರೆ
ಲಕ್ಷ್ಮೇಶ್ವರ,ಆ.20: ತಾಲೂಕಿನಾದ್ಯಂತ ರೈತರು ಸುಮಾರು ಎಂಟತ್ತು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಹೆಸರು ಈಗ ಕಟಾವಿಗೆ ಬಂದಿದ್ದು ಬಿಟ್ಟು ಬಿಡದೆ ಕಾಡುತ್ತಿರುವ ಮಳೆಯಿಂದಾಗಿ ರೈತರು ಹೆಸರು ಒಕ್ಕಲು ದೈತ್ಯಾಕಾರದ ಒಕ್ಕಲಿ ಯಂತ್ರಗಳಿಗೆ ಮೊರೆ ಹೋಗಿದ್ದಾರೆ.
ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿರುವ ರೈತರು ಅನಿವಾರ್ಯವಾಗಿ ಯಂತ್ರಗಳ ಮುಖೇನ ಹೆಸರುಬೇಳೆ ಜಮೀನುಗಳಲ್ಲಿ ಯಂತ್ರಗಳ ಮುಖಾಂತರ ಹೆಸರುಕಾಳನ್ನು ಬೇರ್ಪಡಿಸುತ್ತಿದ್ದಾರೆ.
ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಕೇವಲ ಲಕ್ಷ್ಮೇಶ್ವರ ಅಲ್ಲದೆ ಸುತ್ತಮುತ್ತಲ ಗ್ರಾಮಗಳು ಮತ್ತು ತಾಲೂಕುಗಳನ್ನು ಕಾಡುತ್ತಿದ್ದು ವಿಶೇಷವಾಗಿ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆಯನ್ನು ಬೆಳದಿದ್ದರಿಂದ ಈಗ ಏಕಕಾಲಕ್ಕೆ ಈ ಫಸಲು ಕೊಯ್ಲಿಗೆ ಗೆ ಬಂದಿದೆ.
ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೆಸರು ಬೆಳೆಗೆ ಮೊರೆ ಹೋಗಿದ್ದು ಈಗ ಎಲ್ಲ ರೈತರು ಮಳೆಯಿಂದ ಪಾರಾಗಲು ಯಂತ್ರಗಳ ಸಹಾಯದಿಂದ ವಕ್ಕಲಿ ಮಾಡುತ್ತಿದ್ದಾರೆ ರಾಮಗಿರಿ ಸೇರಿದಂತೆ ಕುಂದಗೋಳ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಹೆಸರು ಯಂತ್ರಗಳ ಸಾಲು ಕಂಡುಬರುತ್ತದೆ.
ಪ್ರತಿ ಎಕರೆಗೆ 1600 ಗಳಿಂದ 2000 ರೂಗಳಿಗೆ ಯಂತ್ರಗಳ ಮಾಲೀಕರು ದರ ಫಿಕ್ಸ್ ಮಾಡಿದ್ದು ರೈತರು ಯಂತ್ರಗಳ ಮಾಲೀಕರ ಮೊರೆ ಹೊಕ್ಕು ಹೆಸರುಕಾಳು ಪಡೆಯಲು ದುಂಬಾಲು ಬಿದ್ದಿದ್ದಾರೆ ಈ ಕುರಿತು ರೈತ ಅಶೋಕ್ ಅವರು ರೈತರಿಗೆ ಈ ವಕ್ಕುವ ಯಂತ್ರಗಳು ಅನುಕೂಲವಾಗಿದ್ದು ಸ್ವಲ್ಪ ದುಬಾರಿಯಾದರೂ ಕೂಲಿ ಕಾರ್ಮಿಕರ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ ಎಂದು ಹೇಳಿದರು.