ಯುವ ವಿದ್ಯಾರ್ಥಿಗಳ ಪಾತ್ರ ರಕ್ತದಾನ ಕ್ಷೇತ್ರದಲ್ಲಿ ಮಹತ್ವದ್ದು”
ಸಂಜೆವಾಣಿ ವಾರ್ತೆ
ಹೊಸಪೇಟೆ ಆ20: ರಕ್ತದಾನ ಶ್ರೇಷ್ಠ ದಾನ ಒಂದು ಜೀವ ಉಳಿಸಲು ರಕ್ತ ಅವಶ್ಯಕವಾಗಿದ್ದಾಗ ನೀಡಲು ಮುಂದಾಗುವ ಮೂಲಕ ಶ್ರೇಷ್ಠ ತೆಯನ್ನು ಮೆರೆಯಬೇಕು ಎಂದು ದಿವ್ಯ ಕೆ.ಮೂರ್ತಿ ಹೇಳಿದರು.
ಸೋಮವಾರ  ಹೊಸಪೇಟೆ  ಟಿ.ಎಂ.ಎ.ಇ, ಎಸ್ ಪಾಲಿಟೆಕ್ನಿಕ್, ಡಿಪ್ಲೊಮಾ ಮೊದಲ ವರ್ಷದ  ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ರಕ್ತದಾನ ಮಹತ್ವ” ಕುರಿತು ವಿಶೇಷ ಉಪನ್ಯಾಸವನ್ನು  ಹಾಗೂ ರಕ್ತದಾನದ ಜಾಗೃತಿ ಮೂಡಿಸಲಾಯಿತು.
ಪ್ರಕೃತಿ ವಿಕೋಪ ಹೇಗೆ ಮತ್ತು ಯಾವಾಗ ಸಂಭವಿಸುತ್ತದೆ ಎಂದು ಹೇಳಲಾಗದು. ಯುವ ವಿದ್ಯಾರ್ಥಿಗಳು ಇಂತಹ ಸಂದರ್ಭಗಳಲ್ಲಿ  ಸಮರ್ಥವಾಗಿ ಸೇವೆ ಮಾಡಲು ಮುಂದಾಗಬೇಕಿದೆ ಸಂಸ್ಥೆಯ ಹರ್ಷ ತಿಳಿಸಿದರು .
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲಾಗಿದೆ  ವಿಜಯನಗರ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಬಂದಾಗ ಅಥವಾ ಕೊರತೆ ಉಂಟಾದಾಗ ರಕ್ತದಾನ ಮಾಡಲು ಮುಂದಾಗಬೇಕಿದೆ ಎಂದು ತಿಳಿಸಿದರು.
ಪಾಲಿಟೆಕ್ನಿಕ್ ವಿವಿಧ ವಿಭಾಗದ ಒಟ್ಟು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡು ಉಪಯುಕ್ತವಾದ ಮಾಹಿತಿ ಪಡೆದರು. 
ರಾಜ್ಯದ ಎಲ್ಲಾ  ಕಾಲೇಜುಗಳಲ್ಲಿ ವರ್ಷಕ್ಕೆ ಎರಡರಿಂದ ಮೂರು ಬಾರಿಯಾದರು ರಕ್ತದಾನ ಶಿಬಿರ ಹಮ್ಮಿಕೊಳ್ಳಬೇಕೆಂದು ಕರೆ ಕೊಟ್ಟರು. ರಕ್ತದಾನಕ್ಕೆ ಅರ್ಹತೆ ಹೊಂದದ ವಿದ್ಯಾರ್ಥಿಗಳು ರಕ್ತದಾನ ಪರಿಚಾರಕರಾಗಿ ಜಾಗೃತಿ ಮೂಡಿಸಲು ನಮ್ಮ ಜೊತೆ ಕೈಜೋಡಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಕ್ತದಾನ ಬಗ್ಗೆ ಅವರಲ್ಲಿದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಂಡರು ಮತ್ತು ತಾವೂ ಈ ಸೇವೆ ಮಾಡಲು ಕೆವಿಕೆ ಜೊತೆ  ತೊಡಗಿಸಿಕೊಳ್ಳವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಟಿ.ಎಂ.ಎ.ಇ.ಎಸ್ ಪಾಲಿಟೆಕ್ನಿಕ್ ನ ಪ್ರಾಂಶುಪಾಲ ಡಾ ಹೆಚ್. ಕೆ. ಶಂಕರಾನಂದ ಮಾತನಾಡಿ  ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕಿದೆ. ಈ ಮಹತ್ವದ ಕಾರ್ಯದಿಂದ ಅದೆಷ್ಟೋ  ಜೀವಗಳನ್ನು ಉಳಿಸಿದಂತಾಗುತ್ತದೆ ಎಂದು ತಿಳಿಸಿದರು. 
ಎಸ್ ಡಿ ಪಿ ಡೊನೆಷನ್ ಬಗ್ಗೆ ನಮಗೆ ಮಾಹಿತಿ ತಿಳಿದಿರಲಿಲ್ಲ ಎಂದರು.  ಕೆವಿಕೆ ಸಂಸ್ಥೆಯ ಕಾಲೇಜಿನಿಂದ ಕಾಲೇಜಿಗೆ ರಕ್ತದಾನ ಜಾಗೃತಿ ಕಾರ್ಯಕ್ರಮ‌ದಿಂದ ಯುವ ಸಮೂಹ ಜಾಗೃತವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟಿ‌.ಎಂ.ಎ.ಇ.ಎಸ್ ಪಾಲಿಟೆಕ್ನಿಕ್ ಉಪ-ಪ್ರಾಂಶುಪಾಲ ಟಿ ನಜಿರುದ್ದೀನ್, ಎನ್ ಎಸ್ಎಸ್ ಅಧಿಕಾರಿ  ಎಂ.ಸಿ ಮಂಜುನಾಥ ಮತ್ತು  ರಾಜೇಶ್ ಇ ಹೆಚ್, ಡಾ  ಶಿವರಾಜ ಬಿ ಹೆಚ್ ವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಐ ಎಸ್ ಟಿ ಇ ವಿದ್ಯಾರ್ಥಿ ಮತ್ತು ಸಿಬ್ಬಂದಿ ಸಮನ್ವಯಾಧಿಕಾರಿಗಳು ಮತ್ತು ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.