ಶ್ರಾವಣ ಮಾಸದ 3ನೇ ಸೋಮವಾರ : ನದಿ ತೀರದಲ್ಲಿ ವಿಶೇಷ ಪೂಜೆ
ಸಂಜೆವಾಣಿ ವಾರ್ತೆ
ಹರಿಬೊಮ್ಮನಹಳ್ಳಿ: ಆ.20 ತಾಲೂಕಿನ ನಂದಿಪುರ ಪುಣ್ಯಕ್ಷೇತ್ರದ ಶ್ರೀಗುರು ದೊಡ್ಡ ಬಸವೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿಯ ದೇವರನ್ನು ಹೂವಿನಿಂದ ಅಲಂಕರಿಸಿದ ಎರಡು ಪಲ್ಲಕ್ಕಿಯಲ್ಲಿರಿಸಿ, ಹತ್ತಿರದ ತುಂಗಭದ್ರಾ ನದಿಯ ಹಿನ್ನೀರಿಗೆ  ತೆರಳಿ ಶಾಸ್ತ್ರೋಕ್ತ ಪೂಜಾ ವಿಧಾನಗಳನ್ನು  ನೆರವೇರಿಸಿದರು.
ನಂದಿಪುರ ಪುಣ್ಯಕ್ಷೇತ್ರದ  ಡಾ.ಮಹೇಶ್ವರ ಸ್ವಾಮೀಜಿ ಮತ್ತು  ಅಭಿನವ ಚರಂತೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದ ಊರಿನ ಹಿರಿಯರು, ಎಲ್ಲಾ ಸಮಾಜದ ಬಾಂಧವರು, ಸಮಸ್ತ ದೈವಸ್ಥರು ಈ ಪೂಜೆಯಲ್ಲಿ ಭಾಗವಹಿಸಿದ್ದರು
ನದಿಯ ಹಿನ್ನೀರಿನ ತೀರದಲ್ಲಿ  ಗದ್ದುಗೆ ಕಂಬಳಿಯನ್ನು ಹಾಸಿ, ದೇವರ ಪಲ್ಲಕ್ಕಿಯನ್ನು ಕೂಡಿಸಿ, ನದಿಯಲ್ಲಿ ದೇವರನ್ನು ಮಡಿ ಮಾಡಿ, ನಂತರ ವಿಶೇಷ  ಪೂಜೆಯನ್ನು ಸಲ್ಲಿಸಿದರು. ನಂತರ ಎಲ್ಲರೂ ಪ್ರಸಾದ ವಿನಿಯೋಗ ಮಾಡಿದರು.
ಹಿರೇಮಠದ ಕೊಟ್ರೇಶ, ಬಿ.ಎಂ. ಚಂದ್ರಶೇಖರಯ್ಯ,  ಮೈನಳ್ಳಿ ದೊಡ್ಡಬಸಪ್ಪ,  ಬಣಕಾರ್ ರುದ್ರಪ್ಪ, ಹೋಟೆಲ್ ನಾಗರಾಜ, ಅಂಗಡಿ ರಾಜಣ್ಣ, ಹೊಸಮನಿ ಬಸವರಾಜ,  ಬಿ ಎಂ. ಶಂಕ್ರಪ್ಪ, ಸೀಗನಹಳ್ಳಿ  ನಾಗರಾಜ್,  ಡಂಬರಳ್ಳಿ ಬಸವರೆಡ್ಡಿ, ಬಡಿಗೇರ ಜಗದೀಶ, ಒಳ್ಳೆ ಯಂಕಪ್ಪ, ಉಪನಾಯಕನಹಳ್ಳಿ ಶ್ರೀನಿವಾಸ,  ಬಣಕಾರ ವೀರೇಶ್, ದೊಡ್ಮನೆ ರೇಣುಸಾಬ್, ಉತ್ತಂಗಿ ಜಬ್ಬರಸಾಬ್ ಸೇರಿದಂತೆ ಇತರರು ಇದ್ದರು.
ಗ್ರಾಮೀಣರು ಶ್ರಾವಣ 3ನೇ ಸೋಮವಾರವನ್ನು ಹೊಳೆಗೆ ಹೋಗುವ ಸೋಮವಾರ ಎಂದು ತಮ್ಮ ಆಡು ಭಾಷೆಯಲ್ಲಿ ಹೇಳುವರು.
ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಜನರಿಗೆ ಶ್ರಾವಣ ಸೋಮವಾರ ವಿಶೇಷ ಹಾಗೂ ಮಹತ್ವವಾದ ದಿನವಾಗಿದೆ.