ಟೆಕ್ನಿಕಲ್ ಟೀಂ ಜೊತೆ ಶಾಸಕರು ಮಾಲವಿ ಜಲಾಶಯಕ್ಕೆ ಭೇಟಿ ಎರಡು ದಿನದಲ್ಲಿ ಸೋರಿಕೆ ಬಂದ್
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.20 ತಾಲೂಕಿನ ಜೀವನಾಡಿ ಮಾಲವಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಗಳಲ್ಲಿ ಪೋಲಾಗುತ್ತಿರುವ ನೀರನ್ನು ಪರಿಶೀಲಿಸಿ  ಸಾಗರದಿಂದ ಬಂದಿರುವ  ಟೆಕ್ನಿಕಲ್ ಟೀಮ್ ಎರಡು ದಿನದಲ್ಲಿ ಸಂಪೂರ್ಣ ಸೋರಿಕೆಯನ್ನು ತಡೆಗಟ್ಟಲಾಗುವುದು ಎಂದು ಶಾಸಕ ಕೆ ನೇಮಿರಾಜ್ ನಾಯ್ಕ ತಿಳಿಸಿದರು. ಟೆಕ್ನಿಕಲ್ ಟೀಮ್  ಜೊತೆ ಸೋಮವಾರ ಜಲಾಶಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಶೀಘ್ರವಾಗಿ ಮೊದಲು ಸೋರಿಕೆಯಾಗುತ್ತಿರುವ ನೀರನ್ನು ತಡೆಗಟ್ಟಬೇಕಾಗಿದೆ. ಆ ಕೆಲಸವನ್ನು ನಾಳೆ ಬೆಳಗ್ಗೆಯಿಂದ  ಆರಂಭವಾಗಿ ಎರಡು ದಿನದಲ್ಲಿ ಸಂಪೂರ್ಣ ಸೋರಿಕೆ ನೀರನ್ನು ತಡೆಗಟ್ಟಲಾಗುವುದು. ನಿರ್ವಹಣೆ ಇಲ್ಲದೆ 10 ಗೇಟುಗಳು ಕೂಡ ರಿಪೇರಿ ಇವೆ. ಸರ್ಕಾರ ಮತ್ತು ಇಲಾಖೆಯ ನಿರ್ಲಕ್ಷತೆಯಿಂದ  ನಿರ್ವಹಣೆ ಮಾಡದೇ ಇರುವುದೇ ಇದಕ್ಕೆ ಕಾರಣ. ಈಗಾಗಲೇ ಕ್ರೆಸ್ಟ್ ಗೇಟ್ ದುರಸ್ತಿ ಸಂಬಂಧಿಸಿದಂತೆ ಟೆಂಡರ್ ಓಪನ್ ಆಗಿದೆ ಬೇತಾಳ ಅಸೋಸಿಯೇಟ್ಸ್ ಕಂಪನಿ ಕೈಗೆತ್ತಿಕೊಳ್ಳಲಿದೆ. ಮೊದಲು ರೈತರಿಗೆ ನೀರು ಸಂಗ್ರಹಿಸುವಂತಹ ಕೆಲಸವಾಗಬೇಕು ಇದರಿಂದ ಸುತ್ತ ನಾಲ್ಕು ಗ್ರಾಮದ ರೈತರ ಪಂಪ್ ಸೆಟ್ ಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಸೋರಿಕೆಯನ್ನು ತಡೆಗಟ್ಟಿ ನೀರು ಇರುವಾಗಲೇ ಕ್ರಸ್ಟ್ ಗೇಟ್ ಗಳ ರಿಪೇರಿ  ಮಾಡಲಾಗುವುದು.
 ಜಲಾಶಯ ನಿರ್ಮಾಣದಲ್ಲಿ ದಿ. ಚನ್ನಬಸನಗೌಡರ ಪಾತ್ರ ಬಹಳ ದೊಡ್ಡದು ಅವರ ಕನಸಿನ ಕೂಸು ಅದಕ್ಕೆ ನಾವು ಜೀವ ತುಂಬ ಬೇಕಾಗಿದೆ. ಶಾಶ್ವತ ನೀರಿನಿಂದ ಜಲಾಶಯ ತುಂಬಲು ಸಾಧ್ಯವಿಲ್ಲ. ದೇವರ ಕೃಪೆಯಿಂದ ಮಳೆಯಾದರೆ ಜಲಾಶಯ ಭರ್ತಿಯಾಗಲು ಸಾಧ್ಯ. ರೈತರಿಗೆ ಅನುಕೂಲವಾಗಲು ಎಡ ಮತ್ತು ಬಲದಂಡೆ ಕಾಲುವೆ ಯ ಗೆಟ್ ಗಳನ್ನು ಕೂಡ ರಿಪೇರಿ ಮಾಡಲಾಗುವುದು.
ಜಲಾಶಯ ಕ್ರಸ್ಟ್ ಗೇಟ್ ಗಳು  ನಿರ್ಮಾಣಗೊಂಡು 60 ವರ್ಷ ಆದರೂ ಬದಲಾಯಿಸಿಲ್ಲ. ತಜ್ಞರ ಪ್ರಕಾರ 40 ವರ್ಷದೊಳಗೆ ಗೇಟ್ ಬದಲಾಯಿಸಬೇಕು. ಆದರೆ ಆ ಕೆಲಸ ಆಗಿಲ್ಲ ಅತಿ ಶೀಘ್ರವಾಗಿ 10 ಗೇಟ್ ಗಳನ್ನು ಕೂಡ ಬದಲಾವಣೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದರು.
 ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಇ ಇ ಗಿರೀಶ್ ಮೇಟಿ, ಎ ಇ ಇ ಧರ್ಮರಾಜ್, ತಹಶೀಲ್ದಾರ್ ಆರ್ ಕವಿತಾ, ಟೆಕ್ನಿಕಲ್ ಟೀಮ್ ನ ಶ್ರೀಧರ್, ಮುಖಂಡರಾದ ಶ್ರೀ ಕೃಷ್ಣಮೂರ್ತಿ, ಗುರುಬಸಪ್ಪ, ಜೆಡಿಎಸ್ ತಾಲೂಕಾಧ್ಯಕ್ಷ ವೈ ಮಲ್ಲಿಕಾರ್ಜುನ, ಪುರಸಭೆ ಸದಸ್ಯ ನಾಗರಾಜ್ ಜನ್ನು, ಹೋಟೆಲ್ ಸಿದ್ದರಾಜು, ಬಿಜಿ ಬಡಿಗೇರ್ , ಬಸವರಾಜ್ ಬಡಿಗೇರ್, ಶ ಕೃಷ್ಣಮೂರ್ತಿ ಶೆಟ್ರು  ಬ್ಯಾಟಿ ನಾಗರಾಜ್, ಆಪ್ತ ಸಹಾಯಕ ದೊಡ್ಡಬಸಪ್ಪ ರೆಡ್ಡಿ, ಚಿತ್ತವಾಡಗಿ ಪ್ರಕಾಶ್ ಇತರರಿದ್ದರು.