ಅಂಧರ ಶಾಲೆಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮದಿನಾಚರಣೆ
ಬೆಂಗಳೂರು, ಆ. ೨೦- ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರವರ ಹಾಗೂ ಬಡವರ ಬಂಧು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರವರ ಜನ್ಮ ದಿನಾಚರಣೆಯನ್ನು ಶೇಷಾದ್ರಿಪುರ ಬಳಿ ಇರುವ ಕರ್ನಾಟಕ ಅಂದರ ಶಾಲೆಯಲ್ಲಿ ಇಬ್ಬರು ನಾಯಕರ ಜನ್ಮದಿನವನ್ನು ಆಚರಿಸಲಾಯಿತು,
ರಾಜೀವ್ ಗಾಂಧಿ ರವರು ದೇಶದ ಅಭಿವೃದ್ಧಿಗೆ ೨೧ನೇ ಶತಮಾನದ ಏಳಿಗೆಗೆ ಅತ್ಯಂತ ಪ್ರಾಮಾಣಿಕತೆಯಿಂದ ಶ್ರಮಿಸಿದ ಮಹಾನ್ ನಾಯಕರು
ರಾಜೀವ್ ಗಾಂಧಿ ಅವರ ಆಡಳಿತದಲ್ಲಿ ದೇಶದ ಯುವಕರು ಅತ್ಯಂತ ಉನ್ನತ ಮಟ್ಟದ ಸ್ಥಾನಗಳಿಗೆ ಅರ್ಹತೆಯನ್ನು ಗಳಿಸಿ ಮಾಹಿತಿ ತಂತ್ರಜ್ಞಾನದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾದರು ಎಂದು ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ತಿಳಿಸಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ರವರು ತಮ್ಮ ಅವಧಿಯಲ್ಲಿ ಹಿಂದುಳಿದ ವರ್ಗಕ್ಕೆ ಹಾಗೂ ರೈತರಿಗೆ ನೀಡಿದ ಅಪಾರ ಕೊಡುಗೆಯನ್ನು ಕರ್ನಾಟಕ ರಾಜ್ಯದ ರೈತರು ಹಾಗೂ ಬಡವರ್ಗದವರು ಇಂದಿಗೂ ಸಹ ದೇವರಾಜ ಅರಸುರವರನ್ನ ಸ್ಮರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿ ಪ್ರಕಾಶ್ ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಪುಟ್ಟರಾಜು, ಹೇಮರಾಜು, ಉಮೇಶ್, ನವೀನ್, ಜಿ. ಕುಮಾರ್, ಮಧು ಮತ್ತು ಸ್ನೇಹಿತರು ಉಪಸ್ಥಿತರಿದ್ದರು.
ಮಾಜಿ ಪ್ರಧಾನ ಮಂತ್ರಿ ದಿ. ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಶೇಷಾದ್ರಿಪುರಂನ ಅಂಧರ ಶಾಲೆಯಲ್ಲಿ ಆಚರಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂ.ಎಲ್.ಐ. ಅಧ್ಯಕ್ಷ ಎಸ್. ಮನೋಹರ್, ಬೆಂ.ಕೇಂದ್ರ ಪ್ರಚಾರ ಸಮಿತಿ ಅಧ್ಯಕ್ಷ ಜಿ ಪ್ರಕಾಶ್ ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಪುಟ್ಟರಾಜು, ಹೇಮರಾಜು, ಉಮೇಶ್, ನವೀನ್, ಜಿ. ಕುಮಾರ್, ಮಧು ಮತ್ತು ಸ್ನೇಹಿತರು ಉಪಸ್ಥಿತರಿದ್ದರು.