ಬಾಲಾಂಜನೇಯ ದೇವಸ್ಥಾನದಲ್ಲಿನಾಳೆಯಿಂದ 3 ದಿನ  ಶತಾವಧಾನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,20- ನಗರದ ಬಾಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಾಳೆಯಿಂದ ಮೂರುದಿನಗಳ ಕಾಲ‌ ಬೆಳಿಗ್ಗೆ 9 ಮಧ್ಯಾಹ್ನ 1 ರವರೆಗೆ ಮತ್ತು  ಸಂಜೆ 4 ರಿಂದ 7 ರವರೆಗೆ ಎರೆಡು ಅವಧಿಗೆ ಶತಾವಧಾನ ಹಮ್ಮಿಕೊಂಡಿದೆಂದು ಹರಿಹರ ಪುರದ  ಸಚ್ಚಿದಾನಂದ ಸರಸ್ವತಿ ಶ್ರೀಗಳ ಆಪ್ತ ಕಾರ್ಯದರ್ಶಿ ರಘುನಾಥ ಶಾಸ್ತ್ರಿ ತಿಳಿಸಿದ್ದಾರೆ.
ಅವರಿಂದು ಬಾಲಾಂಜನೇಯ ಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪ್ಪದಲ್ಲಿ ಸುದ್ದಿಗೋಷ್ಟಿ ನಡೆಸಿ.
ಸಚ್ಚಿದಾನಂದ ಸರಸ್ವತಿ ಶ್ರೀಗಳು  ಆ 17 ರಿಂದ ಚಾತುರ್ಮಾಸ ನಡೆಸುತ್ತಿದ್ದಾರೆ. ಇದರಂಗವಾಗಿ ತೆಲುಗು ಭಾಷೆಯ ಶತಾವಧಾನಿಗಳಾದ ವದ್ದಿಪರ್ತಿ ಪದ್ಮಾಕರ್ ಮತ್ತು ಉಪ್ಪಲದಢಿಯಂ ಭರತ್ ಶರ್ಮ ಅವರು ಶತಾವಧಾನ ನಡೆಸಿಕೊಡಲಿದ್ದಾರೆ.
ಸಚ್ಚಿದಾನಂದ ಸರಸ್ವತಿ ಶ್ರೀಗಳ ದರ್ಶನ ಬೆಳಿಗ್ಗೆ 11.30 ರಿಂದ, ಲಕ್ಷ್ಮೀ ನರಸಿಂಹ ಕಲ್ಯಾಣ ಮಹೋತ್ಸವ ಇರುತ್ತದೆ. ಪ್ರತಿ ಭಾನುವಾರ ಮಾತ್ರ ಪ್ರವಚನ ಇರುತ್ತದೆಂದು ಗುರುಗಳ ಭಕ್ತೆ ಎಸ್.ರಾಜೇಶ್ವರಿ ತಿಳಿಸಿದರು
ಸುಧದಿಗೋಷ್ಟಿಯಲ್ಲಿ ವೆಂಕಟರಮಣ, ವಾಣಿಶ್ರೀ ಮೊದಲಾದವರು ಇದ್ದರು.