ಸದ್ಭಾವನಾ ದಿನಾಚರಣೆ ಪ್ರತಿಜ್ಞೆ ವಿಧಿ
ಸಿರವಾರ.ಅ.೨೦- ಎಲ್ಲಾ ಧರ್ಮಗಳ ಭಾರತೀಯ ಜನರಲ್ಲಿ ರಾಷ್ಟ್ರೀಯ ಏಕೀಕರಣ, ಶಾಂತಿ, ವಾತ್ಸಲ್ಯ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ’ಸದ್ಭಾವನಾ ದಿವಸ್’ ಅಥವಾ ಸಾಮರಸ್ಯ ದಿನ ಎಂದು ಆಚರಿಸಲಾಗುತ್ತದೆ ಎಂದು ತಹಸೀಲ್ದಾರ ರವಿ ಎಸ್ ಅಂಗಡಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ವಿಧಿಯನ್ನು ” ಜಾತಿ, ಧರ್ಮ,ಪ್ರದೇಶ,ಮತ ಅಥವಾ ಭಾಷೆಯ ಭೇದಭಾವವಿಲ್ಲದೇ ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೆನೆಂದು ನಾನು ಪ್ರತಿಜ್ಞೆ ಮಾಡುತ್ತೆನೆ ಅಲ್ಲದೇ ವೈಯಕ್ತಿಕವಾಗಿಯಾಗಲಿ ಅಥವಾ ಸಾಮೂಹಿಕವಾಗಿಯಾಗಲಿ ನಮ್ಮಲ್ಲಿರುವ ಎಲ್ಲ ಭೇದಭಾವನೆಗಳನ್ನು ಹಿಂಸಾಚಾರಕ್ಕೆ ಅವಕಾಧ ನೀಡದೆ ಸಮಾಲೋಚನೆ ಹಾಹೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೆವೆಂದು ಸಹ ಪ್ರತಿಜ್ಞೆ ಮಾಡುತ್ತೇನೆ” ಎಂದು ಭೋದಿಸಿದರು. ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ ಅಬ್ದುಲ್ ವಾಹೀದ್, ಶಿರಸ್ತೆದಾರ ಪಕೃದ್ದಿನ್, ನಾಡತಹಸೀಲ್ದಾರ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಾಥ, ಎಸ್ ಡಿ ಎ ಈರೇಶ,ದಯಾನಂದ,ಸಿಬ್ಬಂದಿಗಳಾದ ಅಮರ, ಶರಣಬಸವ,ಶಕುಂತಲ, ಲಾವಣ್ಯ,ಶ್ರೀದೇವಿ,ವಿಜಯಲಕ್ಷ್ಮಿ, ಹಿಂದುಳುದ ಸಮಾಜದ ಉಪಾದ್ಯಕ್ಷ ಚಂದ್ರಶೇಖರ ಹಡಪದ್, ಕಾರ್ಯಾದ್ಯಕ್ಷ ಹುಲಿಗೆಪ್ಪ ಮಡಿವಾಳ,ಲಕ್ಷ್ಮಣಗುತ್ತೆದಾರ,ಆರ್ಯ ಈಡಿಗ ಸಮಾಜದ ತಾ.ಅ ರಾಮನಗೌಡ, ಜಂಬಣ್ಣಗುತ್ತೆದಾರ, ಅಶೋಕಗುತ್ತೆದಾರೆ ಕಡದಿನ್ನಿ, ಭಿಮರಾಜ, ಗೋಪಾಲಗೌಡ ಕಡದಿನ್ನಿ, ನಾಗರಾಜ ಶಾಖಾಪೂರು, ನಾಗೇಶ, ಭೀಮರಾಜ ಎಂ.ಜಿ ಕ್ಯಾಂಪ್ ಸೇರಿದಂತೆ ಇನ್ನಿತರರು ಇದರು.