ಆ.31ರಂದು ಪಿ.ಯು .ಕಾಲೇಜ್ ಅತಿಥಿ ಉಪನ್ಯಾಸಕರ ಜಿಲ್ಲಾ ಮಟ್ಟದ ಸಮಾವೇಶ
ಸಂಜೆವಾಣಿ ವಾರ್ತೆ
ಬಳ್ಳಾರಿ.ಆ20-ಕರ್ನಾಟಕ ರಾಜ್ಯದ್ಯಂತ  ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ. ಹಾಗೂ ಸೇವಾ ಭದ್ರತೆ ಒದಗಿಸಬೇಕು ಮತ್ತು ಅತಿಥಿ ಉಪನ್ಯಾಸಕರು 10 ಪಿರಿಯಡ್ ವಾರಕ್ಕೆ ಕಾರ್ಯಭಾರ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು  ಆಗ್ರಹಿಸಿ ನಡೆಯುತ್ತಿರುವ ಬಳ್ಳಾರಿ- ವಿಜಯನಗರ ಜಿಲ್ಲೆಗಳ ಪ್ರಥಮ ಜಿಲ್ಲಾಮಟ್ಟದ ಸಮಾವೇಶವು ಇದೇ ಆಗಸ್ಟ್ 31 ರಂದು ಬಳ್ಳಾರಿಯಲ್ಲಿ ನಡೆಯುತ್ತಿದೆ
ಈ ಹಿನ್ನೆಲೆಯಲ್ಲಿ  ಹರಪ್ಪನಹಳ್ಳಿ ತಾಲೂಕು ಮಟ್ಟದ ಸಭೆ ಸೇರಿ ಸಮಾವೇಶದ ಬಗ್ಗೆ ಪ್ರಚಾರ ಮಾಡಲಾಯಿತು. ಎಲ್ಲಾ ಉಪನ್ಯಾಸಕರು ಸಮಾವೇಶಕ್ಕೆ ಭಾಗವಹಿಸಲು ಒಪ್ಪಿದರು.
ಹಾಗೂ ಅತಿಥಿ ಉಪನ್ಯಾಸಕರ ಬೇಡಿಕೆಗಳು ಈಡೇರಬೇಕೆಂದರೆ ಸದೃಢವಾದ ಸಂಘಟನೆ ಮತ್ತು ನಿಸ್ವಾರ್ಥವಾಗಿ ಸಂಘಟನೆಯ ಜವಾಬ್ದಾರಿ ನಿರ್ವಹಿಸಲು ಸದೃಢ ನಾಯಕತ್ವದೊಂದಿಗೆ ಒಂದು ಸಮಿತಿಯ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಹರಪ್ಪನಹಳ್ಳಿ ತಾಲೂಕಿನ ಅತಿಥಿ ಉಪನ್ಯಾಸಕರ ತಾಲೂಕು ಮಟ್ಟದ ಸಮಿತಿಯನ್ನು ಅತಿಥಿ ಉಪನ್ಯಾಸಕರ ರಾಜ್ಯ ಜಂಟಿ ಕಾರ್ಯದರ್ಶಿ ನಾಗರತ್ನ ಎಸ್ ಜಿ ಅವರ ಸಮಕ್ಷಮದಲ್ಲಿ ರಚಿಸಲಾಯಿತು ಎಂದು  ಹರಪನಹಳ್ಳಿ ತಾಲೂಕು ಅತಿಥಿ ಉಪನ್ಯಾಸಕರ ಸಮಿತಿಯ ಅಧ್ಯಕ್ಷ ಹಾಲಪ್ಪ ಎಂ,ರಾಜ್ಯ ಜಂಟಿ ಕಾರ್ಯದರ್ಶಿ
  ನಾಗರತ್ನ ಎಸ್ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ