ವಿಶ್ವ ಕರ್ಮ ಬೆಳಕು ಕೃತಿ‌ಬಿಡುಗಡೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,29-  ಭೀಮಸೇನ ಬಡುಗೇರ ಅವರು ರಚಿಸಿದ, ಹುಬ್ಬಳ್ಳಿಯ ಶ್ರೀವಿಶ್ವಮಹಿ ಸಾಹಿತ್ಯ ಪ್ರಚಾರ ಸಮಿತಿ ಪ್ರಕಟಿಸಿರುವ” ವಿಶ್ವ ಕರ್ಮ ಬೆಳಕು” ಕೃತಿ ಬಿಡುಗಡೆ ಸಮಾರಂಭ ನಗರದ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಮುಂದಿನ ವಿಶ್ವದ ಎಲ್ಲಾ ಪೀಳಿಗೆಗೆ ದಾರಿ ದೀಪ.ಸನಾತನ ವೈದಿಕ ಧರ್ಮ ವೇದಗಳ ವಿಶ್ವ ಕರ್ಮನ ಬಗ್ಗೆ ಪ್ರತಿಯೊಬ್ಬರ ಮನೆ ಗಳಲ್ಲಿ ಇರಬೇಕಾದ ತಿಳಿದುಕೊಳ್ಳಬೇಕಾದ ಪುಸ್ತಕ ವಾಗಿದೆ ಎಂದು ಕೃತಿಕಾರ ಭೀಮಸೇನ ಬಡಿಗೇರ ತಿಳಿಸಿದರು,
ಸಮಾಜದ ಮುಖಂಡರಾದ ವೆಂಕಟೇಶ್ ಬಡಿಗೇರ ಚಂದ್ರಕಾಂತ್ ಎಸ್. ಸೋನಾರ್ ಹಾಗೂ ವಿಶ್ವಕರ್ಮ ಸಮಾಜದ ಇನ್ನಿತರ ಮುಖಂಡರು ಹಾಜರಿದ್ದರು.‌