ಕಳಪೆ ಕಾಮಗಾರಿ ಗುಣಮಟ್ಟ
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೨೦ ನಗರದಲ್ಲಿನ ಹಿರೇ ಹಳ್ಳ ಬ್ರಿಡ್ಜ್ ಕಳಪೆ ಕಾಮಗಾರಿ ತೊರಿಸುವ ವಿಡಿಯೋ ಇನಸ್ಟ್ರಾ ಗ್ರಾಂ ನಲ್ಲಿ ವೈರಲ್ ಆಗಿ ಬಾರಿ ಪ್ರಚಾರಕ್ಕೆ ಬಂದರೂ ಸಿಂಧನೂರು ಜನ ಪ್ರತಿನಿಧಿಗಳು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ಮಾಡಿ ಜನರಿಗೆ ಸುವ್ಯವಸ್ಥಿತ ರಸ್ತೆ ಒದಗಿಸಿ ಕೊಡಲು ಮುಂದಾಗುತ್ತಿಲ್ಲ .ಶಾಸಕ ಹಂಪನಗೌಡ ಬಾದರ್ಲಿ ಹಾಗೂ ನೂತನ ಎಮ್.ಎಲ್.ಸಿ ಬಸನಗೌಡ ಬಾದರ್ಲಿ ಇದ್ದರೂ ಗುಣಮಟ್ಟದ ರಸ್ತೆ ಮಾಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡುತ್ತಿಲ್ಲ ಎಂದು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.
೧೭.೬ ಕೋಟಿ ರೂ ವೆಚ್ಚದಲ್ಲಿ ಮಹಾರಾಷ್ಟ್ರ ತ್ರಿಮೂರ್ತಿ ಕನಸ್ಟ್ರಕ್ಷನ್ ಅವರಿಂದ ಸ್ಥಳೀಯ ಉಪ ಗುತ್ತೆದಾರರು ಕಾಮಗಾರಿ ನಿರ್ವಹಣೆ ಮಾಡಿದ್ದು ಎಲ್ಲಾ ಕಡೆ ಕಿತ್ತಿ ಹೋಗಿ ಇತ್ತೀಚಿನ ಗೊಲ್ಡನ್ ಸ್ಟಾರ್ ಗಣೇಶ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಚಲನಚಿತ್ರದ ಹಾಡಿಗೆ ಕಳಪೆ ಕಾಮಗಾರಿ ಕುರಿತು ’ನೀರ ಹೊಳೆಯಂತೆ ರಸ್ತೆಯ ಮದ್ಯ ಹೊಂಡವೆ ತುಂಬಿದೆ ’ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬಾರಿ ಪ್ರಮಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ವಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಧಿಕಾರದಲ್ಲಿದ್ದರೂ ಗುತ್ತೆದಾರ ,ಅಧಿಕಾರಿಗಳಿಂದ ಉತ್ತಮ ಗುಣಮಟ್ಟದ ರಸ್ತೆ ಸಾರ್ವಜನಿಕರಿಗೆ ಒದಗಿಸಿ ಕೊಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ.
ಪ್ರತಿನಿತ್ಯ ಬಾರಿ ಪ್ರಮಾಣದ ವಾಹನಗಳ ಓಡಾಟದೊಂದಿಗೆ ಮಳೆ ಬಂದು ರಸ್ತೆ ಇನ್ನೂ ಹದಗಡುತ್ತಲೆ ಇದೆ .ಮೊದಲೆ ಕ್ಯೋರಿಂಗ್ ಇಲ್ಲದೆ ಅರೆ ಬಾರಿ ಕಾಮಗಾರಿಗೆ ಸಾಕ್ಷಿಯಾಗಿದ್ದ ಈ ಬ್ರಿಡ್ಜ್ ರಸ್ತೆ ಸಂಪೂರ್ಣ ಆಳಾಗಿ ಹಳ್ಳ ಹಿಡಿದಿದೆ.ಇದಕ್ಕೆ ಮುಕ್ತಿ ಯಾವಾಗ ಎಂದು ಹಿಡಿಶಾಪ ಹಾಕುತ್ತಿದ್ದಾರೆ.