ಶಾಸಕರಿಗೆ ರಾಖಿ ಕಟ್ಟಿದ ಕು.ಜ್ಯೋತಿ ಅಕ್ಕ
ಸಿರವಾರ.ಅ೧೯- ಒಡಹುಟ್ಟಿದವರಿಗೆ ಮಾತ್ರ ರಾಖಿ ಕಟ್ಟಬೇಕು ಎಂದು ಎಲೂ ಹೇಳಿಲ, ಪ್ರತಿ ವರ್ಷ ಕು.ಜ್ಯೋತಿ ಅಕ್ಕನವರು ನೂಲ ಹುಣ್ಣಿಮೆಯಂದು ಕರೆಸಿ ರಾಖಿ ಕಟ್ಟುತ್ತಾರೆ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ಜನತೆಗೆ ಆದ್ಯಾತ್ಮೀಕ ಉಣಬಡಿಸಿ ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಮಾನ್ವಿ ಶಾಸಕರಾದ ಜಿ.ಹಂಪಯ್ಯನಾಯಕ ಹೇಳಿದರು. ಪಟ್ಟಣದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನೂಲ ಹುಣ್ಣಿಮೆ ಅಂಗವಾಗಿ ಕು.ಜ್ಯೋತಿ ಅಕ್ಕನವರು ಶಾಸಕರಾದ ಜಿ.ಹಂಪಯ್ಯ ನಾಯಕ ಸಾಹುಕಾರ ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಯುವಮುಖಂಡರಾದ ಶಿವಶರಣ ಸಾಹುಕಾರಅರಕೇರಿ, ಪ.ಪಂ ವಾರ್ಡ ನಂ ೧೧ ಸದಸ್ಯರಾದ ಭೂಪನಗೌಡ , ನಾಮನಿರ್ದೇಶನ ಸದಸ್ಯ ರಂಗನಾಥ ನಾಯಕ ಇದ್ದರು.