ಜಗ್ಗತ್ತಿಗೆ ಕೌಶಲ್ಯ ಕಲಿಸಿದ ಜನಾಂಗ- ರವಿ ಎಸ್ ಅಂಗಡಿ
ಸಿರವಾರ.ಅ೧೯- ಶಿಲಾಯುಗದಿಂದ ಸಿಲಿಕಾನ್ ಯುಗದವರೆಗೆ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ ಸಮುದಾಯವೇ ಕೊರಮ ಕೊರವ. ಕೈಕಾಡಿ ಸಮಾಜದ ಬಗ್ಗೆ ಮಹಾತ್ಮ ಗೌತಮ ಬುದ್ಧನ ಕಾಲದಲ್ಲೂ ಉಲ್ಲೇಖಿಸಲಾಗಿದೆ. ಜಗತ್ತಿಗೆ ಕೌಶಲ ಪರಿಚಯಿಸಿದ ಸಮಾಜವಿದು. ನೂಲು ಕೊಟ್ಟರೆ ತಮ್ಮ ಕೈಬೆರಳುಗಳಿಂದ ಹಗ್ಗ, ಬುಟ್ಟಿ, ಮೂರ್ತಿ, ಚಾಪೆ ಮಾಡಿ ಕೊಡುತ್ತಾರೆ ಎಂದು ತಹಸೀಲ್ದಾರ ರವಿ ಎಸ್ ಅಂಗಡಿ ಹೇಳಿದರು.
ನೂಲಿ ಚಂದಯ್ಯ ಜಯಂತಿ ಅಂಗವಾಗಿ ತಹಸೀಲ್ದಾರ ಕಛೇರಿಯಲ್ಲಿ ನೂಲಿ ಚಂದಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು ನೂಲಿ ಚಂದಯ್ಯ ಅವರ ೪೮ ವಚನಗಳು ಸಿಕ್ಕಿವೆ. ಇವರ ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಗಿವೆ. ಕಾಯಕದಿಂದಲೇ ದೇವರನ್ನು ಕಂಡ ಈ ಮಹಾನ್ ಶರಣರ ಬದುಕು ನಮಗೆ ಆದರ್ಶವಾಗಬೇಕು ನುಡಿದಂತೆ ನಡೆದ ನೂಲಿ ಚಂದಯ್ಯ ಅವರು ಶ್ರೇಷ್ಠ ಕಾಯಕ ಜೀವಿ. ಇವರ ಜೀವನಾದರ್ಶಗಳನ್ನು ನಮ್ಮ ಬದುಕಲ್ಲಿ ಪಾಲಿಸಬೇಕು’ ಎಂದು ನೂಲಿ ಚಂದಯ್ಯ ಅವರ ೪೮ ವಚನಗಳು ಸಿಕ್ಕಿವೆ. ಇವರ ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಗಿವೆ. ಕಾಯಕದಿಂದಲೇ ದೇವರನ್ನು ಕಂಡ ಈ ಮಹಾನ್ ಶರಣರ ಬದುಕು ನಮಗೆ ಆದರ್ಶವಾಗಬೇಕು ಎಂದರು.
ಕಸಾಪ ಅದ್ಯಕ್ಷ ಸುರೇಶ ಹೀರಾ ಮಾತನಾಡಿದರು. ಶಿರಸ್ತೆದಾರ ಪಕೃದ್ದಿನ್, ನಾಡತಹಸೀಲ್ದಾರ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಾಥ, ಎಸ್ ಡಿ ಎ ಈರೇಶ,ದಯಾನಂದ, ಕೊರಮ ಸಮಾಜದ ಜಿಲ್ಲಾದ್ಯಕ್ಷ ಕುಮಾರ ಜಿ.ಕೆ.ಭಜಂತ್ರಿ, ಡಿ.ಯಮನೂರು,ಹನುಮೇಶ ಭಜಂತ್ರಿ, ಬಸವರಾಜ, ಸಿಬ್ಬಂದಿಗಳಾದ ಅಮರ, ಶರಣಬಸವ, ಲಾವಣ್ಯ, ಸೇರಿದಂತೆ ಇನ್ನಿತರರು ಇದರು