ವಿಕಲಚೇತನರಿಗೆ ಭೌತ ಚಿಕತ್ಸೆ ಅವಶ್ಯ
ಅರಕೇರಾ.ಆ೨೦:ದೈಹಿಕ ಅಂಗ ಚಲನೆಯ ತೊಂದರೆಯಿಂದಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಮಸ್ಯೆಯನ್ನು ಎದುರಿಸುತ್ತಿರುವ ವಿಕಲಚೇತನ ಮಕ್ಕಳಿಗೆ ಭೌತ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ವಿಕಲಚೇತನ ಮಕ್ಕಳಿಗೆ ಹಮ್ಮಿಕೊಂಡಿದ್ದ ಫಿಜಿಯೊಥೆರಫಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.
ಆರ್‌ಡಬ್ಲೂಡಿ ಕಾಯ್ದೆ ೨೦೧೬ ರ ಪ್ರಕಾರ ೨೧ ವಿಕಲತೆಯನ್ನು ಗುರುತಿಸಲಾಗಿದೆ. ಪ್ರತಿಯೊಬ್ಬ ವಿಕಲಚೇತನರು ಎಲ್ಲರಂತೆ ಗೌರವಯುತವಾಗಿ ಜೀವನ ನಡೆಸಬೇಕಾಗಿದೆ. ಇದಕ್ಕೆ ಮುಖ್ಯವಾಗಿ ಶಿಕ್ಷಣದ ಅವಶ್ಯಕತೆಯಿದೆ. ಆದ್ದರಿಂದ ಪ್ರಯಿಯೊಬ್ಬ ವಿಕಲಚೇತನರು ಶಿಕ್ಷಣ ಪಡೆಯಬೇಕು ಎಂದರು.
ರಿಮ್ಸ್ ಆಸ್ಪತ್ರೆ ಡಿಡಿಆರ್‌ಸಿ ನೋಡಲ್ ಅಧಿಕಾರಿ ಹನುಮಂತ ಮಾತನಾಡಿ, ಸರ್ಕಾರದಿಂದ ವಿಕಲಚೇತನರಿಗೆ ಹಲವಾರು ಸೌಲಭ್ಯಗಳು ಸಿಗುತ್ತವೆ. ಪ್ರತಿಯೊಬ್ಬರು ಯುಡಿಐಡಿ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಸರ್ಕಾರದ ಸೌಲಭ್ಯ ಪಡೆಯಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮುಂದೆ ಬರಬೇಬೇಕಾದರೆ ಶಿಕ್ಷಣವಂತರಾಗಬೇಕು ಎಂದರು.
ಬಿಐಆರ್‌ಟಿ ರಾಮಣ್ಣ ಮಾತನಾಡಿ, ಫಿಜಿಯೊಥೆರಫಿ ಚಿಕಿತ್ಸೆಯನ್ನು ಪಡೆದವರು ವೈದ್ಯರ ಸಲಹೆಯನ್ನು ತಮ್ಮ ಮಕ್ಕಳಿಗೆ ಮನೆಯಲ್ಲಿ ಭೌತ ಚಿಕಿತ್ಸೆ, ಸರಳ ವ್ಯಾಯಾಮ ಮಾಡಿಸಬೇಕು ಎಂದರು.
ಫಿಜಿಯೋಥೆರಫಿಸ್ಟ್ ಡಾ.ಹನುಮೇಶ ಕುಲಕರ್ಣಿ, ಸಿಆರ್‌ಪಿ ಬಸವರಾಜ, ಮುಖ್ಯ ಶಿಕ್ಷಕ ದೇವಿಂದ್ರ ಕುಮಾರ, ಬಿಐಇಆರ್‌ಟಿಗಳಾದ ಉಮ್ಮಣ್ಣ ನಾಯಕ, ಶಿವಮ್ಮ, ಬಸವರಾಜ ಇತರರಿದ್ದರು.