ಭ್ರಷ್ಟಾಚಾರದಲ್ಲಿ ಶಾಮಿಲಾದ ಪಿ.ಡಿ.ಒ ರೈಕೊಡೆ: ಆರೋಪ
ಬೀದರ್ :ಆ.೨೦:ತಾಲೂಕಿನ ಅಲಿಯಂಬರ್ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರದೀಪ ರಾಯಕೊಡೆ ಅವರು ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ನಿಗ್ರಹ ಸಮಿತಿ ಜಿಲ್ಲಾಧ್ಯಕ್ಷ ಸಂಗಮೇಶ ಭಾವಿದೊಡ್ಡಿ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಅಲಿಯಂಬರ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಖಾತಾ ೧೧-ಬಿ ಮತ್ತು ೧೧-ಎ ಖಾತೆಗಳು ಆಕ್ರಮವಾಗಿ ಮಂಜೂರು ಮಾಡಿ ಆಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲಿಯಂಬರ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪ್ರದೀಪ್ ರೈಕೋಡೆ ಪ್ರದೀಪ್ ರೈಕೋಡೆ ಅವರನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳನ್ನಾಗಿ ನೇಮಿಸಿದ್ದರಿಂದ ಅವರು ೧೫ ಮತ್ತು ೧೪ನೇ ಹಣಕಾಸು ಯೋಜನೆ ಅಡಿಯಲ್ಲಿ ಸರಿಯಾಗಿ ಯಾವುದೇ ಕೆಲಸ ಮಾಡದೆ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡಿದಿದ್ದಾರೆ. ಅದರಲ್ಲೂ ವಿಶೇಷವಾಗಿ ವಿಕಲಚೇತನರ ಅನುದಾನ ದುರ್ಬಳಿಕೆ ಮಾಡಿಕೊಂಡಿರುವ ಆರೋಪ ಇವರ ಮೇಲಿದೆ. ಈ ಪಿ.ಡಿ.ಒ ಯಾವುದೇ ಕೆಲಸ ಮಾಡದೆ ಬಹಳಷ್ಟು ಅಕ್ರಮ ಎಸಿಗಿದ್ದಾರೆಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹತ್ತು ಹಲವಾರು ಸರಿ ಅವರ ಗಮನಕ್ಕೆ ತಂದರೂ ಸಹ ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವಾರದಲ್ಲಿ ಕ್ರಮ ಕೈಗೊಳ್ಳದೆ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಭಾವಿದೊಡ್ಡಿ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.