ನೂಲಿ ಚಂದಯ್ಯ ಜಯಂತಿ ಆಚರಣೆ
ಸಿರವಾರ.ಅ೧೯- ಪಟ್ಟಣದ ಲಿಂಗಸ್ಗೂರು ರಸ್ತೆಯಲ್ಲಿರುವ ನೂಲಿ ಚಂದಯ್ಯ ನಾಮಪಲಕಕ್ಕೆ ಕೊರಮ ಕೊರಚ ಸಮುದಾಯಗಳಿಙದ ಪೂಜೆಸಲ್ಲಿಸಿ ಮಾಲಾರ್ಪಣೆ ಗಣ್ಯರಿಂದ, ಸಮಾಜದಿಂ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಿ ಸಮಾಜದ ಜಿಲ್ಲಾದ್ಯಕ್ಷ ಜಿ.ಕೆ.ಕುಮಾರ ಭಜಂತ್ರಿ ಮಾತನಾಡಿ ನೂಲಿ ಚಂದಯ್ಯ ತಳ ಸಮುದಾಯದಲ್ಲಿ ಹುಟ್ಟಿ ಶ್ರೇಷ್ಠ ವಚನಗಳನ್ನು ರಚಿಸಿ ಸಮಾಜದ ಕಣ್ಣಡಿಯಾಗಿದ್ದಾರೆ. ಇವರು ಒಟ್ಟು ೪೮ ವಚನಗಳನ್ನು ರಚಿಸಿದ್ದು, ಅವುಗಳೆಲ್ಲವೂ ಸಮಾಜವನ್ನು ತಿದ್ದುವ, ಎಚ್ಚರಿಸುವ ವಚನಗಳಾಗಿವೆ. ಚಂದಯ್ಯನ ವಚನ್ನಗಳನ್ನು ನಿತ್ಯ ಪಠಿಸಬೇಕು. ವಚನಗಳ ಸಾರವನ್ನು ಅರಿಯಬೇಕು. ಆಗ ಮಾತ್ರ ನೂಲಿ ಚಂದಯ್ಯ ಜಯಂತಿ ಮಾಡಿದ್ದು ಸಾರ್ಥಕವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವಾಣೀಜ್ಯೋದ್ಯಮಿ, ಜಿ ಲೋಕ ರೆಡ್ಡಿ, ಉಮೇಶ ಸಾಹುಕಾರ ಜೇಗರಕಲ್,ಪ.ಪಂ ಮಾಜಿ ಉಪಾದ್ಯಕ್ಷ ಚನ್ನಪ್ಪ ಗಡ್ಲ, ಹರಳಪ್ಪ ಯದ್ದಲದಿನ್ನಿ, ಕಸಾಪ ಅದ್ಯಕ್ಷ ಸುರೇಶ್ ಹಿರಾ,ಡಿ.ಯಮನೂರು ಯಂಕಪ್ಪ ಗುಜ್ಜಲ್, ವೆಂಕಟೇಶ್ ದೊರೆ ಅಧ್ಯಕ್ಷರು ಕರವೇ, ಕೊರಮ ಸಮಾಜದ ಜಿಲ್ಲಾಧ್ಯಕ್ಷ ಕುಮಾರ್ ಜಿ ಕೆ ಭಜಂತ್ರಿ, ತಾಲೂಕ ಅಧ್ಯಕ್ಷ ಯಂಕಪ್ಪ ಭಜಂತ್ರಿ,ಸಣ್ಣ ಹನುಮಂತ
ಭಜಂತ್ರಿ, ಜಿಲ್ಲಾ ಉಪಾದ್ಯಕ್ಷ ಬಸವರಾಜ್ ಭಜಂತ್ರಿ,ದುರ್ಗಪ್ಪ ಮಸ್ಕಿ,ಹುನಗುಂದ ರಾಮಣ್ಣ,ಮಾದೇವಪ್ಪ ಭಜಂತ್ರಿ,
ಹನುಮೇಶ ಭಜಂತ್ರಿ,ಸುಂಕಪ್ಪ ಶಶಿಕುಮಾರ್ ಭಜಂತ್ರಿ,ರಾಮ ಭಜಂತ್ರಿ, ಅರುಣ್ ಕುಮಾರ್ ಜಿ ಕೆ ಭಜಂತ್ರಿ,
ಶಿವು ಭಜಂತ್ರಿ ಟೈಲರ್