ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಭೆ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ ೨೦, ಮಾನ್ವಿ ನಗರದ ಕಾಕತೀಯ ಶಾಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಾಮಾನ್ಯ ಸಭೆ ಇಂದು ನಡೆಯಿತು. ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ಮಸ್ಕಿ ವಕೀಲರು ಜಿಲ್ಲಾ ಒಕ್ಕೂಟದ ಲೆಕ್ಕಪತ್ರ ವರದಿ ಮಂಡನೆ ಮಾಡಿದರು.ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಹಂಪನಗೌಡ ಬಾದರ್ಲಿ ಇವರ ಅನುಪಸ್ಥಿತಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾದ ಎಚ್. ಶರ್ಪುದ್ದೀನ್ ಪೋತ್ನಾಳ್ ಇವರು ಮಾತನಾಡಿ ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಮೇಲೆ ಹೇರುತ್ತಿರುವ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಹಾಗೂ ಇನ್ನೊಂದು ವಾರದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಸೇರಿ ಹೋರಾಟದ ರೂಪರೇಷೆಗಳನ್ನು ಸಿದ್ಧ ಮಾಡಬೇಕು ಮತ್ತು ನವೀಕರಣಕ್ಕೆ ಕಂಟಕವಾಗಿರುವ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ, ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಭೂ ಪರಿವರ್ತನಾ ಆದೇಶ ವಿರುದ್ಧ ಕಾನೂನು ಹೋರಾಟ ಮಾಡಲು ಕೋರ್ಟ್ ಮೊರೆ ಹೋಗಲು ನಾವೆಲ್ಲ ನಿರ್ಧರಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಒಕ್ಕೂಟದ ಅಧ್ಯಕ್ಷರಾದ ಜೆ.ಎಲ್ ಕೇಶವರೆಡ್ಡಿ,ಸಿರಿವಾರ ತಾಲೂಕ್ ಅಧ್ಯಕ್ಷರಾದ ಪ್ರಕಾಶ್ ಪಾಟೀಲ್, ಲಿಂಗಸುಗುರು ತಾಲೂಕ ಅಧ್ಯಕ್ಷರಾದ ಮಂಜುನಾಥ್ ಸ್ವಾಮಿ ತೋರಣದಿನ್ನಿ, ಸಿಂಧನೂರು ತಾಲೂಕ ಪ್ರಧಾನ ಕಾರ್ಯದರ್ಶಿ ವೀರೇಶ್ ಅಗ್ನಿ ಜಿಲ್ಲಾ ಒಕ್ಕೂಟದ ಮುಖಂಡರಾದ ಟಿ. ಬಸವರಾಜ್ ಸಿರಿವಾರ, ಥಾಮಸ್ ಬೆಂಜಾಮಿನ್ ರಾಯಚೂರ, ಆರ್. ಸಿ ಪಾಟೀಲ್ ಸಿಂಧನೂರ್, ಚೆನ್ನಪ್ಪ ದೇವದುರ್ಗ, ಮಲ್ಲಪ್ಪ, ಕೆ .ವಿ. ರೆಡ್ಡಿ ಮಸ್ಕಿ, ಚಂದ್ರಶೇಖರ್ ಬಲ್ಲಟಗಿ, ಶೇಕ್ ಫರೀದ್ ಉಮ್ರೀ, ನಾಗೇಶ್ವರರಾವ್ ಸೇರಿದಂತೆ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.