ಕ್ಷೌರರ ಮಾಡಲು ನಿರಾಕರಿಸಿ ದಲಿತ ವ್ಯಕ್ತಿಯ ಕೊಲೆ ಖಂಡನೆ
ದೇವದುರ್ಗ.ಆ೨೦: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಯಮನೂರಪ್ಪ ತಂದೆ ಈರಪ್ಪ ಬಂಡಿಹಾಳ ಎನ್ನುವ ದಲಿತ ವ್ಯಕ್ತಿಯನ್ನು ಜಾತಿಯ ಕಾರಣಕ್ಕೆ ಕ್ಷೌರ ಮಾಡಲು ನೀರಾಕರಿಸಿ ಮುದುಕಪ್ಪ ಎನ್ನುವ ವ್ಯಕ್ತಿ ಕೊಲೆ ಮಾಡಿರುವ ಧಾರಾಣ ಘಟನೆಯನ್ನು ಮಾದಿಗ ಮೀಸಲಾತಿ ಹೋರಾಟ ಸಂಸ್ಥಾಪಕ ಸಮಿತಿ. ಎಂ ಆರ್ ಎಚ್ ಎಸ್ ಮುಖಂಡ ಶಾಂತಕುಮಾರ ಹೊನ್ನಟಿಗಿ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯನ್ನು ಸೂಕ್ತ ರೀತಿಯಲ್ಲಿ ತನಿಖೆಮಾಡಿ ಸಂಬಂದಪಟ್ಟ ಪೋಲಿಸರ
ಮೇಲೆ ಸೂಕ್ತ ಕ್ರಮ ಕೈಗೊಂಡು ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ಕ್ರಮ ವಹಿಸಿ ಕೊಲೆ ಮಾಡಿರುವ ಮುದುಕಪ್ಪನನ್ನು ಕಠಿಣವಾದ ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಆತನ ಆಸ್ತಿ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು.
ಮೃತ ಕುಟುಂಬಕ್ಕೆ ೫೦ ಲಕ್ಷಪರಿಹಾರ ನೀಡುವ ಮೂಲಕ ಮೃತ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ನೀಡಬೇಕು.
ಜಾತಿ ತಾರತಮ್ಯ ನಿರ್ವಹಣೆ ಮಾಡಲು ವಿಫಲವಾದ ತಾಲೂಕು ಆಡಳಿತದ ಧೋರಣೆಯನ್ನು ಸಮಾಜ ತೀವ್ರವಾಗಿ ಖಂಡಿಸಲಾಗುತ್ತದೆ. ರಾಜ್ಯದಲ್ಲಿ ಈ ರೀತಿ ಘಟನೆಯನ್ನು ಮರುಕಳಿಸದಂತೆ ಎಚ್ಚರ ವಹಿಸಬೇಕು. ಇಲ್ಲದೆ ಪದೇಪದೇ ದಲಿತರ ಮೇಲೆ ಇಂತ ಘಟನೆ ಮರುಕಳಿಸಿದರೆ. ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸದರು. ಈ ಸಂದರ್ಭದಲ್ಲಿ ಅರ್ಜುನ ಕೊಪ್ಪರ, ಶಾಮ್ ಸುಂದರ, ರಮೇಶ, ಮುತ್ತುರಾಜ, ಮಲ್ಲಿಕಾರ್ಜುನ ಸಿಂಗ್ರಿ,ಮಲ್ಲಪ್ಪ, ತುಕರಾಮ್, ರಮೇಶ, ಮಲ್ಲಿಕಾರ್ಜುನ, ಸೇರಿದಂತೆ ಇತರ ಇದ್ದರು.