ಗ್ರಾಮೀಣ ಭಾಗದಲ್ಲಿ ಡೆಂಗ್ಯೂ ಮಲೇರಿಯಾ ತಡೆಗಟ್ಟಲು ಕ್ರಮ ಕೈಗೊಳ್ಳಿ
ದೇವದುರ್ಗ.ಆ೨೦: ತಾಲೂಕಿನ ೩೩ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಡುತ್ತಿರುವ ಡೆಂಗ್ಯೂ,ಮಲೇರಿಯಾ, ಹಂದಿ ಜ್ವರ, ಹಕ್ಕಿ ಜ್ವರ, ಚಿಕನ್ ಗುನ್ಯಾ ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾಗುತ್ತಿರುವ ಜನರನ್ನು ಕೂಡಲೇ ತಡೆಗಟ್ಟಬೇಕು ಎಂದು ಕರ್ನಾಟಕ ರೈತ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಕೆ. ಗಿರಲಿಂಗ ಸ್ವಾಮಿ . ಒತ್ತಾಯಿಸಿದರು. ನಂತರ ತಾಲೂಕು ಪಂಚಾಯಿತಿ ಎಡಿ ಅಣ್ಣಾರಾವ್ ಅವರಗೆ ಮನವಿ ಪತ್ರ ಸಲ್ಲಿಸಿ ಮಂಗಳವಾರ ಮಾತನಾಡಿ,
ಪಟ್ಟಣ ಸೇರಿ ತಾಲೂಕಿನ ಹೇಮ ನಾಳ, ಮಲದಕಲ್, ಮುಂಡರಗಿ, ಅಲ್ಲದೆ ೩೦ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯು ಸ್ವಚ್ಛತೆ ನೈರ್ಮಲ್ಯ, ನಿರ್ಮೂಲನೆ ಮಾಡಲು ಸಾರ್ವಜನಿಕರಿಗಾಗಿ ಮುಂಜಾಗ್ರತೆ ಮಾಡಿಸುವಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗಳು ವಿಫಲಗೊಂಡಿವೆ. ಗ್ರಾಮದ ರಸ್ತೆಯ ಹಾಗೂ ಮನೆಯ ಪಕ್ಕ ತಿಪ್ಪೇಗುಂಡಿ ತೆಗ್ಗು, ಚರಂಡಿಗಳು ಸ್ವಚ್ಛತೆಗೊಳಿಸದೆ. ಚರಂಡಿಗಳಲ್ಲಿ ಜಾಲಿ ಗಿಡ ಬೆಳೆದ ಹಿನ್ನೆಲೆಯಲ್ಲಿ ಕಲುಷಿತ ನೀರು ಸರಸವಾಗಿ ಹೋಗದೆ ಸೊಳ್ಳೆ ಉತ್ಪತ್ತಿಯಾಗಿ ಹಲವಾರು ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಿದ್ದು, ಆರೋಗ್ಯ ಇಲಾಖೆ ವತಿಯಿಂದ ವರದಿ ತಯಾರಿಸಿ ಈಗಾಗಲೇ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ವರದಿ ನೀಡಿದರು ಗ್ರಾಮ ಪಂಚಾಯಿತಿ ಪಿಡಿಓಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೂಡಲೇ ನಿರ್ಲಕ್ಷ ವಹಿಸಿದ ಪಂಚಾಯತ ಆಡಳಿತ ಮಂಡಳಿಗಳು ವಿರುದ್ಧ ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇವರ ಮೇಲೆ ಸೂಕ್ತವಾದ ಕ್ರಮ ಕೈಗೊಂಡು ಕುಡಿಯುವ ನೀರು, ರಸ್ತೆ ಚರಂಡಿ ವಿದ್ಯುತ್ ದೀಪ, ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ರೋಗಮುಕ್ತ ಗ್ರಾಮಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದೆ ನಿರ್ಲಕ್ಷ ವಹಿಸಿದರೆ ಸಂಘಟನೆಯ ವತಿಯಿಂದ ತಾಲೂಕು ಪಂಚಾಯಿತಿ ಮುಂದೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದುರಗಣ್ಣ ಇರಬಗೇರಾ, ಬಾಬು ನಾಯಕ, ರಮೇಶ ನಾಯಕ, ಮಲ್ಲೇಶ ನಿಜವಂತ, ಶಿವರಾಜ ಮುಂಡರಗಿ, ಯಂಕಪ್ಪ ವೆಂಗಳಪೂರ, ಆದರ್ಶ ಕುಮಾರ ದೊರೆ, ಸೇರಿದಂತೆ ಇದ್ದರೆ. ಫೋಟೋ೨೦ ಡಿವಿಡಿ ೧.