ಅರಕೇರಾ ಸಾರಿಗೆ ಬಸ್ ಡಿಕ್ಕಿ ಮಂಗ ಸಾವು ಸಂಪ್ರಾದಯವಾಗಿ ಅಂತ್ಯಕ್ರಿಯೆ
ಅರಕೇರಾ.ಆ೨೦:
ಅರಕೇರಾ ಪಟ್ಟಣದಿಂದ ದೇವದುರ್ಗ ಮಾರ್ಗವಾಗಿ ಹೊರಟ್ಟಿದ ಕೆಕೆ ಆರ್ ಟಿಸಿ ಬಸ ಚಾಲಕನ ಅಜಾಗರುಕತೆಯಿಂದ ಮಂಗವೊಂದು ಸಾವನ್ನಪ್ಪಿರುವ ಘಟನೆ ಸೋಮವಾರ ಜರುಗಿದೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀಭಾಗ್ಯವಂತಿ ದೇವಿ ದೇವಸ್ಥಾನದ ಗೇಟ್ ಮುಂದೆ ಮಂಗನಿಗೆ ಸಾರಿಗೆ ಬಸ್ ಡಿಕ್ಕಿಯಾಗಿದ್ದು ಮಂಗ ಸ್ಥಳದಲ್ಲೇ ಮೃತಪಟ್ಟಿದೆ ಮಂಗ ಮೃತ ಪಟ್ಟಿರುವದನ್ನು ಕಂಡು ಸ್ಥಳಿಯರು ಬಾವುಕರಾದರು.ಯುವಕರು ಮೃತ ಮಂಗನ ಅಂತ್ಯ ಸಂಸ್ಕಾರವನ್ನು ಸಂಪ್ರಾದಾಯವಾಗಿ ನೆರೆವೇರಿಸಿದರು. ಮಂಗನಿಗೆ ಮೈತೊಳೆದು ಹೊಸ ಸಮವಸ್ತ್ರ ತೊಡಿಸಿ ಹೂ ಹಾರ ಹಾಕಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ ನಂತರ ಅಂತ್ಯಕ್ರಿಯೆ ನೇರವೆರಿಸಿದರು.
ಯುವಕರಾದ,ರಂಗನಾಥಪೂಜಾರಿ,ಚನ್ನಬಸವಡ್ರೈವರ,ಭಲವಂತ್ರಾಯಪೂಜಾರಿ.ಅಕ್ಬರ,ಚನ್ನಪ್ಪ,ವೆಂಕಟೇಶಡ್ರೈವರ,ಪ್ರಭುಬಳಿಗೇರಾ,ರಾಜೇಶ,ಹನುಮಂತ್ರಾಯನಾಯಕ ಮುಂತಾದವರು ಉಪಸ್ಥಿತರಿದ್ದರು.