ಅರಕೇರಾ ಪಟ್ಟಣದಲ್ಲಿನ ಸರಕಾರಿ ಆದರ್ಶ ವಿದ್ಯಾಲಯ ಶಾಲೆ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ
ಅರಕೇರಾ.ಆ೨೦:
ಅರಕೇರಾ ಪಟ್ಟಣದಲ್ಲಿನ ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೋಳ್ಳುತ್ತಿರುವ ಶಾಲೆಯ ಮಕ್ಕಳಿಗೆ ಪಟ್ಟಣದಲ್ಲಿನ ಯುವ ಮುಖಂಡರಾದ ಕೆ.ಭಗವಂತ್ರಾಯನಾಯಕ ಹಾಗೂ ರಾಘವೇಂದ್ರನಾಯಕ ಮಕ್ಕಳಿಗೆ ಕ್ರೀಡಾಕೂಟಕ್ಕೆ ಅನುವಾಗಲೆಂದು ಖೋಖೋ ಮತ್ತು ಕಬ್ಬಡಿ ತಂಡಗಳ ಎಲ್ಲಾ ಸ್ಪರ್ದಾಳುಗಳಿಗೆ ನೂತನವಾದ ವಿಭಿನ್ನ ಕ್ರೀಡಾ ಜರ್ಸಿಗಳನ್ನು ಕೊಡುಗೆಯಾಗಿ ನೀಡಿ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಮೆರೆದಿದ್ದಾರೆ.ಅಲ್ಲದೇ ಮಕ್ಕಳಿಗೆ ವಲಯ ಮಟ್ಟ ತಾಲ್ಲೂಕ ಮಟ್ಟ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದವರೆಗೂ ಸ್ಪರ್ದಿಸಿ ಪಟ್ಟಣದ ತಾಲ್ಲೂಕಿನ ಜಿಲ್ಲೆಯೆ ಹೆಮ್ಮೆಯನ್ನು ಹೆಚ್ಚಿಸುವಂತೆ ಪ್ರೇರಣೆಯನ್ನು ನೀಡಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಜರ್ಸಿಯನ್ನು ವಿತರಿಸುವ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್ .ಮಂಜುಳಾ ಊರಿನ ಮುಖಂಡರು ಈ ಕೊಡುಗೆಯನ್ನು ಮೆಚ್ಚಿಒ ಸರಕಾರಿ ಶಾಲೆಗಳ ಮಕ್ಕಳಿಗೆ ಊರಿನ ಮುಖಂಡರ ಕೊಡುಗೆ ಅಪಾರವಾದ್ದು ಹಾಗೂ ಎಲ್ಲರ ಪ್ರೇರಣೆ ಸಹಕಾರ ಸದಾ ನಮ್ಮ ಶಾಲೆಗೆ ಇರಲಿ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಅತಿಥಿ ಶಿಕ್ಷಕರು ಗ್ರಾಮದ ಯುವಕರಾದ ಬಸವರಾಜ ಶರಣಬಸವ ನಾಯಕ ಕ್ಯಾದಿಗ್ಗೇರಾ ಮುಂತಾದವರು ಉಪಸ್ಥಿತರಿದ್ದರು.
ಚಿತ್ರಸುದ್ದಿ ಸಂಖ್ಯೆ ೧೯(೧) ಅರಕೇರಾ ಪಟ್ಟಣದಲ್ಲಿನ ಸರಕಾರಿ ಆದರ್ಶ ವಿದ್ಯಾಲಯ ಶಾಲೆ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡುತ್ತಿರುವದು.