ಸಂಪಾಜೆಯಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ: ಕೃಷಿ ನಾಶ
ಸುಳ್ಯ:ಕೊಡಗು ಸಂಪಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಕೃಷಿ ನಾಶವಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಸಂಪಾಜೆಯ ಚಡಾವಿನ ಹರೀಶ ಅವರ ಕೃಷಿ ತೋಟಕ್ಕೆ ಆನೆಗಳ ಹಿಂಡು ನುಗ್ಗಿ ಅಡಕೆ, ತೆಂಗು , ಬಾಳೆ ಗಿಡಗಳನ್ನು ಸಂಪೂರ್ಣ ಪಡಿಸಿದೆ. ಸಂಪಾಜೆ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ಮಾಡಿ ಕೃಷಿ ನಾಶ ಮಾಡುತ್ತಿದ್ದು, ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ.