ಭಕ್ತಿಯ ಬೃಂದಾವನದಲ್ಲಿ ಅಹಂಭಾವದ ಮೊಳಕೆ ಒಡೆಯದಿರಲಿ: ಹಾರಕೂಡ ಶ್ರೀ
ಸಂಜೆವಾಣಿ ವಾರ್ತೆ
ಬೀದರ್:ಆ.೨೦: ಭಕ್ತಿ ಬದುಕಿನ ಭೂಮಿಗೆಯಾಗಿದ್ದು, ಭಕ್ತಿಯ ಬೃಂದಾವನದಲ್ಲಿ ಯಾವತ್ತು ಅಹಂಭಾವದ ಮೊಳಕೆ ಯೋಡೆಯದಂತೆ ಸದಾ ಜಾಗೃತರಾಗಿರಬೇಕು ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಶ್ರಾವಣ ಮಾಸದ ಮಧ್ಯ ಸೋಮವಾರದಂದು ಜರುಗಿದ ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಉತ್ಸವದ ಅಂಗವಾಗಿ ಆಯೋಜಿಸಿದ ಭಜನಾ ಸಮಾರಂಭದ ಸಾನಿಧ್ಯ ವಹಿಸಿದ ಶ್ರೀಗಳು ಪವಿತ್ರ ಪ್ರೀತಿಯ ಮೋಹೊನ್ನತ ಹಂತವೇ ಭಕ್ತಿ ಎನಿಸಿಕೊಳ್ಳುತ್ತದೆ.
ಗುರು ಭಕ್ತಿ, ದೈವ ಭಕ್ತಿ, ರಾಷ್ಟ್ರ ಭಕ್ತಿ, ಮಾತಾ ಪಿತರ ಮೇಲಿನ ಭಕ್ತಿ ಹೀಗೆ ಭಕ್ತಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಗುರುತಿಸಲ್ಪಟ್ಟರೂ ಮೂಲ ಒಂದೇ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು.
ದೇವರಿರುವಲ್ಲಿ ಭಕ್ತನಿರುವಿಕೆ ಕಾಣಬಹುದು, ಆದರೆ ಭಕ್ತನಿದ್ದಲ್ಲಿ ದೇವರು ಖಂಡಿತ ನೆಲೆ ನಿಂತಿರುತ್ತಾನೆ ಎನ್ನುವಲ್ಲಿ ಸಂಶಯವಿಲ್ಲ.
ಹಾಗಾಗಿ ಭಕ್ತನ ಮನದಲ್ಲಿ ಯಾವತ್ತೂ ಅಹಂಭಾವ ಸುಳಿದಾಡಲೇಬಾರದು.
ಈ ಜಗತ್ತು ದೇವನ ಪ್ರಯೋಗಶಾಲೆ ಇಲ್ಲಿ ನಾವೆಲ್ಲರೂ ಒಂದಿಲ್ಲೊAದು ರೀತಿಯಲ್ಲಿ ಪ್ರಯೋಗಕ್ಕೆ ಒಳಪಡುತ್ತೇವೆ ಎಂಬ ನಿತ್ಯ ಸತ್ಯ ಅರಿತು ಬದುಕು ಸುಂದರಗೊಳಿಸಿಕೊಳ್ಳಬೇಕು.
ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ಸದೃಢ ಹಾಗೂ ಸಾಮರಸ್ಯ ಸಮಾಜದ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡಲಿ, ಸರ್ವರಿಗೂ ಶ್ರೇಯಸ್ಕರ ಬದುಕು ಪ್ರಾಪ್ತವಾಗಲಿ ಎಂದು ಶುಭ ಹಾರೈಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇವ ಪೂಜಾರಿ, ಜಿ. ಎಸ್. ಮಾಲಿಪಾಟೀಲ, ಪಂಡಿತರಾವ ದೇಗಾಂವ, ವಿಜಯಕುಮಾರ ಕುಲಕರ್ಣಿ, ಚೆನ್ನಪ್ಪ ದಾಮಾ, ರಾಜಕುಮಾರ ಹಂಜಗೆ, ನಾಗಣ್ಣ ಪೀರಜೆ, ಶಿವಪುತ್ರ ಶೀಲವಂತ ಮುಂತಾದವರು ಉಪಸ್ಥಿತರಿದ್ದರು.
ಮಧ್ಯ ಸೋಮವಾರ ನಿಮಿತ್ಯ ಜರುಗಿದ ಭಜನಾ ಕಾರ್ಯಕ್ರಮದಲ್ಲಿ ಚನ್ನಮಲ್ಲೇಶ್ವರ ಭಜನಾ ಸಂಘ ಕೋಹಿನೂರ, ರಾಮಲಿಂಗೇಶ್ವರ ಭಜನಾ ಸಂಘ ಹಿಪ್ಪರಗಾ, ಹನುಮಾನ ಭಜನಾ ಸಂಘ ಗದಲೇಗಾಂವ ಬಿ,ಬುದ್ಧ ಬಸವ ಅಂಬೇಡ್ಕರ್ ಭಜನಾ ಸಂಘ ಸಿರಗಾಪುರ, ಬಜರಂಗಬಲಿ ಭಜನಾ ಸಂಘ ಕೊಹಿನೂರ, ಹನುಮಾನ ಭಜನಾ ಸಂಘ ದೇಗಾಂವ, ಬಜರಂಗಬಲಿ ಭಜನಾ ಸಂಘ ಖೇರ್ಡ್ ಕೆ.ವಾಡಿ, ಜೈ ಭಜರಂಗಬಲಿ ಭಜನಾ ಸಂಘ ಚಿಕ್ಕನಾಗಾಂವ, ಮಹಾದೇವ ಭಜನಾ ಸಂಘ ಮುಡಬಿವಾಡಿ, ಹನುಮಾನ ಬಜನಾ ಸಂಘ ಬೆಟಗೇರವಾಡಿ, ಶರಣಬಸವೇಶ್ವರ ಭಜನಾ ಸಂಘ ಚಿಕ್ಕನಾಗಾಂವ, ಶಿವಸಿದ್ದೇಶ್ವರ ಭಜನಾ ಸಂಘ ಖಜೂರಿ, ಮಹಾದೇವ ಬಜನಾ ಸಂಘ ಸಿರಗಾಪೂರ, ಹನುಮಾನ ಭಜನಾ ಸಂಘ ಖೇರ್ಡ್ ಕೆ, ಬೀರಲಿಂಗೇಶ್ವರ ಭಜನಾ ಸಂಘ ಗುಂಡೂರ, ಪರಮೇಶ್ವರ ಭಜನಾ ಸಂಘ ಏಕಲೂರ, ಮಾದೇವ ಭಜನಾ ಸಂಘ ಲೆಂಗಟಿ, ಹನುಮಾನ ಭಜನಾ ಸಂಘ ಜನವಾಡ, ಕಲ್ಲೇಶ್ವರ ಭಜನಾ ಸಂಘ ಕೊತಲಿ, ಶರಣಬಸವೇಶ್ವರ ಭಜನಾ ಸಂಘ ಹತ್ತರಗಾ, ಪರಮೇಶ್ವರ ಬಜನಾ ಸಂಘ ಯಲದಗುಂಡಿ, ಹನುಮಾನ ಬಜನಾ ಸಂಘ ನವನಳ್ಳಿ, ಜೈ ಭಜರಂಗಬಲಿ ಭಜನಾ ಸಂಘ ಮುಡಬಿವಾಡಿ, ಬಜರಂಗಬಲಿ ಭಜನಾ ಸಂಘ ಏಕಲೂರವಾಡಿ, ಹನುಮಾನ ಬಜನಾ ಸಂಘ ಖಾನಾಪುರ, ಬಸವೇಶ್ವರ ಭಜನಾ ಸಂಘ ಕೊತಲಿ, ಶಾಂತಾಬಾಯಿ ಮೀನಹಾಬಳ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ೨೬ಕ್ಕೂ ಅಧಿಕ ಭಜನಾ ಸಂಘದವರು ರಾತ್ರಿವಿಡಿ ಭಜನೆ ಸೇವೆ ಸಲ್ಲಿಸಿ, ಪೂಜ್ಯರಿಂದ ಆಶೀರ್ವಾದ ಪಡೆದರು.
ವಿಠಲ ಹೂಗಾರ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಜಯಕುಮಾರ ಕುಲಕರ್ಣಿ ವಂದಿಸಿದರು.
ಇದಕ್ಕೂ ಮೊದಲು ಶ್ರಾವಣ ಮಾಸದ ಮಧ್ಯ ಸೋಮವಾರ ನಿಮಿತ್ಯ ಹಾರಕೂಡ ಗ್ರಾಮದಲ್ಲಿ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ಜರುಗಿತು.