ವಚನ ಸಂಸ್ಕøತಿ ಜೊತೆಗೆ ದಾಸೋಹ, ಶಿಕ್ಷಣಕ್ಕೆ ಹೆಚ್ಚಿನ ಒತ್ತು: ಬಸವರಾಜಸ್ವಾಮೀಜಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.20-ವೀರಶೈವ ಲಿಂಗಾಯತ ಸಮಾಜವು ಶಿಕ್ಷಣ, ದಾಸೋಹಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಬಸವಾದಿ ಶರಣ ವಚನ ಸಂಸ್ಕøತಿ ತತ್ವ ಸಿದ್ದಾಂತಗಳನ್ನು ಪಾಲನೆ ಮಾಡಬೇಕು ಎಂದು ಕಾರಾಪುರ ಮಠಾಧ್ಯಕ್ಷರಾದ ಶ್ರೀ ಬಸವರಾಜಸ್ವಾಮೀಜಿ ತಿಳಿಸಿದರು.
ಜಿಲ್ಲೆಯ ಯಳಂದೂರು ಶಂಕರ ಸಭಾ ಭವನದಲ್ಲಿ ನಡೆದ ಯಳಂದೂರು ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 20ನೇ ವರ್ಷದ ವಾರ್ಷಿಕೋತ್ಸವ, ಶರಣ ತತ್ವಾಮೃತ ಸಿಂಚನ ಕಾರ್ಯಕ್ರಮದ 11ನೇ ಮಾಲಿಕೆ ಬಿಡುಗಡೆ ಮತ್ತು ಸಾಧಕರು, ನಿವೃತ್ತರಿಗೆ ಸನ್ಮಾನ,ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಬಸವಶ್ರೀ ಪತ್ತಿನ ಸಹಕಾರ ಸಂಘದ 2ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾಧಿ ಶರಣರು 12ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿ, ವಚನಗಳನ್ನು ರಚನೆ ಮಾಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನಿಡಿದ್ದರು. ಸಂಸ್ಕøತಕ್ಕೆ ಹೆಚ್ಚಿನ ಮಾನ್ಯತೆ ಇದ್ದ ಆ ಕಾಲ ಘಟ್ಟದಲ್ಲಿಯೇ ಸರಳ ಕನ್ನಡದಲ್ಲಿ ವಚನಗಳನ್ನು ರಚನೆ ಮಾಡಿ, ಜನರಿಗೆ ಅರ್ಥ ಮಾಡಿಸುವ ಕೆಲಸವನ್ನು ನಮ್ಮ ಶರಣರು ಮಾಡಿದರು. ದಾಸೋಹ ಪರಂಪರೆಯನ್ನು ಹೇಳಿಕೊಟ್ಟರು. ಮಠ ಮಾನ್ಯಗಳನ್ನು ಸ್ಥಾಪನೆ ಮಾಡಿ, ಮೌಢ್ಯ ಹಾಗು ಮೇಲು ಕೀಳು ಎಂಬ ಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದರು. ಇಂಥ ಸಂಸ್ಕøತಿ ಪರಂಪರೆಯನ್ನು ಹೊಂದಿರುವ ನಮ್ಮ ಸಮಾಜವನ್ನು ಎಲ್ಲರು ಪ್ರೀತಿಸೋಣ. ಅಭಿವೃದ್ದಿಯತ್ತ ಸಾಗೋಣ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ಅಸ್ತಿಯನ್ನಾಗಿ ಮಾಡುವ ಗುರುತರ ಜವಾಬ್ದಾರಿ ಪೋಷಕರಾದ ನಿಮ್ಮ ಮೇಲೆ ಇದೆ ಎಂದರು.
ಗೌಡಹಳ್ಳಿ ವಿರಕ್ತ ಮಠಾಧ್ಯಕ್ಷರಾದ ಶ್ರೀ ಮರಿತೋಟದಾರ್ಯ ಸ್ವಾಮೀಜಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುμÁ್ಪರ್ಚನೆ ನೆರವೇರಿಸಿದರು. ಕೆಸ್ತೂರು ಪಟ್ಟದ ಮಠಾಧ್ಯಕ್ಷರಾದ ಶ್ರೀ ತೊಂಟದಾರ್ಯ ಸ್ವಾಮೀಜಿ ಶರಣ ತತ್ವಾಮೃತ ಸಿಂಚನ 11ನೇ ಮಾಲಿಕೆಯನ್ನು ಬಿಡುಗಡೆ ಮಾಡಿದರು. ಮೈಸೂರು ನೀಲಕಂಠಸ್ವಾಮಿ ಮಠಧ್ಯಕ್ಷರಾದ ಶ್ರೀ ಸಿದ್ಧಮಲ್ಲಸ್ವಾಮೀಜಿ ಸಾಧಕರು ಹಾಗೂ ನಿವೃತ್ತರನ್ನು ಸನ್ಮಾನಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಂಬಳೆ ಮಹದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ವಾರ್ಷಿಕ ವರದಿಯನ್ನು ಮಲ್ಲಪ್ಪ ಹಾಗೂ ಮಹದೇವಸ್ವಾಮಿ ಮಂಡಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿ. ಮಲ್ಲಿಕಾರ್ಜುನಸ್ವಾಮಿ, ಯಳಂದೂರು ತಾಲೂಕು ಅಖಿಲ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ವೀರಭದ್ರಸ್ವಾಮಿ ಅವರು ಪ್ರತಿಭಾ ಪುರಸ್ಕಾರ ನೀಡಿದರು.
ಕಾರ್ಯಕ್ರಮದಲ್ಲಿ ಬಿ. ನಂಜುಂಡಸ್ವಾಮಿ (ಗಿರೀಶ್), ಗುರುಸಿದ್ದಪ್ಪ, ಮಹದೇವಪ್ಪ, ರವಿ ನಂಜುಂಡಸ್ವಾಮಿ, ಮಂಜು ಹೊನ್ನೂರು, ಚಾಮಲಾಪುರದ ಶಿವಕುಮಾರ, ಪಿ. ಮಹದೇವಪ್ಪ, ಶಿವಕುಮಾರ, ಮಲ್ಲಣ್ಣ, ಲೊಕೇಶಮೂರ್ತಿ, ಸಿದ್ದರಾಜು, ಮಹದೇವಪ್ಪ, ಮಂಜು, ನಂಜುಂಡಸ್ವಾಮಿ, ಮಾದೇವಪ್ಪ ಸದಸ್ಯರಾದ ಲಯನ್ಸ್ ಶಿವು, ಹೊನ್ನೂರು ಮಹದೇವಪ್ಪ, ಬಸವರಾಜು, ವೀರಣ್ಣ, ಶಿವಾಲಂಕಾರ, ರಾಜು, ಮಹದೇವಸ್ವಾಮಿ ಮೊದಲಾದವರು ಇದ್ದರು.