ಜಾನಪದ ಗೀತೆ ಸ್ವರ್ಧೆ ವರಲಕ್ಷ್ಮಮ್ಮ ಪ್ರಥಮ
ಕೋಲಾರ,ಆ,೨೦:ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಜಾನಪದ ಗೀತೆ ವಿಭಾಗದಲ್ಲಿ ಕೋಲಾರ ತಾಲ್ಲೂಕಿನ ದೊಡ್ಡಹಸಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಕೆ.ವರಲಕ್ಷ್ಮಮ್ಮ ಅವರು ಪ್ರಥಮ ಸ್ಥಾನ ಗಳಿಸಿದ್ದು, ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್, ಜಂಟಿ ಕಾರ್ಯದರ್ಶಿ ಶ್ರೀರಾಮ್ ಅಭಿನಂದಿಸಿದರು.