ಪ್ರತಿಯೊಬ್ಬರಿಗೂ ಛಾಯಾಗ್ರಹಣವೆಂದರೆ ಬಹಳ ಇಷ್ಟವಾಗುತ್ತದೆ: ಚನ್ನಬಸವ ಸ್ವಾಮೀಜಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.20- ಪ್ರತಿಯೊಬ್ಬರಿಗೂ ಛಾಯಾಗ್ರಹಣವೆಂದರೆ ಬಹಳ ಇಷ್ಟವಾಗುತ್ತದೆ ಎಂದು ಚಾಮರಾಜನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಶ್ರೀ ಚನ್ನಬಸವಸ್ವಾಮಿಗಳು ಬಣ್ಣಿಸಿದರು.
ಅವರು ನಗರದನಂದಿ ಭವನದಲ್ಲಿ ಚಾಮರಾಜನಗರ ಜಿಲ್ಲಾಛಾಯಾ ಗ್ರಹಕರ ಸಂಘದಿಂದ ಹಮ್ಮಿಕೊಂಡಿದ್ದ 185ನೇ ವಿಶ್ವಛಾಯಾಗ್ರಹಕರ ದಿನಾಚರಣೆಯನ್ನು ಉದ್ಘಾಟಿಸಿಮಾತನಾಡಿ, ಪ್ರತಿಯೊಬ್ಬರಿಗೂ ಛಾಯಾಗ್ರಹಣವೆಂದರೆ ಬಹಳಇಷ್ಟವಾಗುತ್ತದೆ. ಪ್ರತಿಯೊಂದು ಕಾರ್ಯಕ್ರಮಗಳಿಗೆ ಪೆÇೀಟೊ ತೆಗೆಯುವವರು ಇದ್ದೆ ಇರುತ್ತಾರೆ. ಸಾಧನೆಯನ್ನು ಮಾಡುವವರು ಛಾಯಾಗ್ರಹಣದ ಮೊರೆ ಹೋಗಲೇಬೇಕು.ಇತ್ತಿಚಿನ ದಿನಗಳಲ್ಲಿ ಛಾಯಾಗ್ರಹಣಕ್ಕೆ ಎದುರು ಮೊಬೈಲ್ ಹಾವಳಿ ಹೆಚ್ಚಿದೆ. ಅದರೂ ಕ್ಯಾಮರಗಳಲ್ಲಿ ತೆಗೆದ ಹಾಗೆ ಮೊಬೈಲ್ ಪೆÇೀಟೊಗಳು ಇರುವುದಿಲ್ಲ. ಎಲ್ಲರೂ ಛಾಯಾಗ್ರಾಹಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನೀಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಬಾಲರಾಜು ಮಾತನಾಡಿ, ಪುರಾತನ ಕಾಲಗಳ ಕ್ಯಾಮರಗಳು ಮತ್ತು ಛಾಯಾ ಗ್ರಹಕ ಹಾಗೂ ಡಿಜಿಟಲ್ ಯುಗದ ಕ್ಯಾಮರಗಳಿಗೂ ಬಹಳ ವ್ಯತ್ಯಾಸವಿದೆ. ಅಂದಿನ ಕಾಲದ ಛಾಯಾ ಗ್ರಾಹಕರು ಒಂದು ಚಿತ್ರವನ್ನು ತೆಗೆಯಲು ಬಹಳ ಕಷ್ಟ ಪಡಬೇಕಿತ್ತು. ಈಗನ ಕಾಲದ ಡಿಜಿಟಲ್ ಕ್ಯಾಮರಗಳಲ್ಲಿ ವ್ಯಕ್ತಿಯನ್ನು ನೋಡಿಕೊಂಡೇ ಕ್ಲಿಕಿಸ ಬಹುದು ಈಗ ಬಹಳ ಸುಲಭವಾಗಿದೆ ಎಂದು ತಿಳಿಸಿದರು.
ಕಾವೇರಿ ನಿಗಮದ ಮಾಜಿ ಅಧ್ಯಕ್ಷ ನಿಜಗುಣರಾಜು ಮಾತನಾಡಿ, ಸಾಧಕ ಏನನ್ನಾದರು ಸಾದಿಸಬಹುದು ಎನ್ನಲು ಛಾಯಾ ಗ್ರಹಣದಲ್ಲಿ ಛಾಯಾಗ್ರಹಕ ಮಾಡಿರುವ ಸಾಧನೆಗಳೆ ಕೆಲವು ಕ್ಷಣಗಳು ಕಾರಣವಾಗುತ್ತದೆ.ಇತ್ತಿಚಿನ ದಿನಗಳಲ್ಲಿ ಛಾಯಾಗ್ರಹಣ ಉತ್ತಮ ಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತ್ ಅಧ್ಯಕ್ಷರಾಮ ಚಂದ್ರು, ಚೂಡಾ ಮಾಜಿ ಅಧ್ಯಕ್ಷ ಹೆಚ್.ಎಸ್. ನಂಜಪ್ಪ, ನಗರಸಭಾ ಮಾಜಿ ಅಧ್ಯಕ್ಷೆ ಆಶಾ ನಟರಾಜು, ಪರಮೇಶ್, ವೈ.ಸಿ.ನಾಗೇಂದ್ರ, ಹೆಚ್.ಎಸ್, ಬಸವರಾಜು. ಜಿಲ್ಲಾಛಾಯಾಗ್ರಹಕರ ಸಂಘದಮಾಜಿ ಅಧ್ಯಕ್ಷ ಗಣೇಶ್ ದಿಕ್ಷತ್, ಶೃತಿರಾಜೇಂದ್ರ ಕುಮಾರ್, ಶ್ರೀನಿಧಿ.ಎಂ.ಎಸ್‍ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾರಂಭದಲ್ಲಿತಾಲ್ಲೂಕುಅಧ್ಯಕ್ಷರು, ಸಂಘದ ಪದಾಧಿಕಾರಿಗಳು ಹಾಜರಿದ್ದರು