ಸಂದನಪಾಳ್ಯದಲ್ಲಿ ಗುಡ್ ಶೆಪರ್ಡ್ ಕಾನ್ವೆಂಟ್ ಉದ್ಘಾಟನೆ
ಸಂಜೆವಾಣಿ ವಾರ್ತೆ
ಹನೂರು ಆ 20 :- ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗುಡ್ ಶೆಪರ್ಡ್ ಕಾನ್ವೆಂಟ್ ಅನ್ನು ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಯಾದ ಬಿಷಪ್ ಬರ್ನಾರ್ಡ್ ಮೊರಾಸ್ ಅವರು ಧಾರ್ಮಿಕ ವಿಧಿ ವಿಧಾನಗಳಿಂದ ಆಶೀರ್ವದಿಸಿದರು.
ಬಳಿಕ ಉದ್ಘಾಟನಾ ಸಮಾರಂಭವನ್ನು ಪ್ರಾಂತ್ಯದ ನಾಯಕಿ ಸಿಸ್ಟರ್ ಲಿಸಿ ಚಾಕೋ ಅವರಿಂದ ನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಂದನಪಾಳ್ಯ ಧರ್ಮಕೇಂದ್ರದ ಗುರುಗಳಾದ ಫಾ ಲೆರ್ನಾಡ್ ,ಇತರ ಗುರುಗಳು ಹಾಗೂ ಸಿಸ್ಟರ್ಸ್ ಗಳು ಉಪಸ್ಥಿತರಿದ್ದರು.