ನುಲಿಯ ಚಂದಯ್ಯ ಜಯಂತೋತ್ಸವ
ಬಸವನಬಾಗೇವಾಡಿ:ಆ.೨೦:೧೨ನೇ ಶತಮಾನದ ಮಹಾಮಾನವತವಾದಿ ಬಸವಣ್ಣವರ ನೇತೃತ್ವದಲ್ಲಿ ಸಮಾಜ ಪರಿವರ್ತನೆಗೆ ದೊಡ್ಡ ಕ್ರಾಂತಿ ಮಾಡಲಾಯಿತು ಎಂದು ತಹಶೀಲ್ದಾರರಾದ ವಾಯ್ ಎಸ್ ಸೋಮನಕಟ್ಟಿ ಅವರು ಅಭಿಪ್ರಾಯಪಟ್ಟರು
ಅವರು ಸೋಮವಾರದಂದು ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾದ ನುಲಿಯ ಚಂದಯ್ಯ ಜಯಂತೋತ್ಸವದಲ್ಲಿ ಮಾತನಾಡಿದರು ಬಸವಣ್ಣವರ ಕ್ರಾಂತಿಗೆ ಹಲವಾರು ಶರಣರು ಕೈ ಜೋಡಿಸಿದ್ದರು ಅದರಲ್ಲಿ ಪ್ರಮುಖವಾಗಿ ನುಲಿಯ ಚಂದಯ್ಯನವರು ಕೂಡ ಒಬ್ಬರಾಗಿದ್ದರು ಎಂದು ಹೇಳಿದರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ ಚಂದಯ್ಯನವರು ಸರ್ವಕಾಲಕ್ಕೂ ನಮಗೆ ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದು ಹೇಳಿದರು ಶರಣರ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು ಶರಣರ ಬದುಕು ನಮಗೆ ಸದಾಕಾಲಕ್ಕೆ ಪ್ರೇರಣೆ ಎಂದು ಹೇಳಿದರು
ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷರಾದ ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ ಬಸವಣ್ಣನವರು ಬಿದ್ದವರನ್ನು ಮೇಲೆತ್ತಿದ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಮಹಾನ್ ವ್ಯಕ್ತಿತ್ವ ಹೊಂದಿದ್ದರು ಎಂದು ಹೇಳಿದರು ಅವರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಳಕಳಿಗೆ ಸಮಾಜದಲ್ಲಿ ಕೆಳಸ್ಥರದ ಅನೇಕ ಶರಣರು ಬಸವಣ್ಣನವರ ಜೊತೆಗೆ ಒಂದಾಗಿ ವಚನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮೇಲು ಕೀಳು ಎನ್ನದೆ ಬಸವಣ್ಣನವರು ಎಲ್ಲರಿಗೂ ಅವಕಾಶ ಕೊಟ್ಟಿದ್ದರು ಅಂತಹ ಶರಣರಲ್ಲಿ ನುಲಿಯ ಚಂದಯ್ಯ ನವರು ಪ್ರಮುಖ ರಾಗಿದ್ದರು
ಕಾಯಕಕ್ಕೆ ಹೆಚ್ಚಿನ ಒತ್ತು ಕೊಟ್ಟ ನುಲಿಯ ಚಂದಯ್ಯನವರು ಸಮಾಜದ ಓರೆ ಕೋರೆಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೇ ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ
ಯಾವುದೇ ಶರಣರು ಯಾವುದೇ ಜಾತಿಗೆ ಧರ್ಮಕ್ಕೆ ಸೀಮಿತವಾಗಿಲ್ಲ ಅವರು ಮನುಕುಲದ ಆಸ್ತಿಯಾಗಿದ್ದಾರೆ ಎಂದು ಹೇಳಿದರು ಸಾಧ್ಯವಾದಷ್ಟು ಶರಣರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ ಉಪಸ್ಥಿತರಿದ್ದರು ಕಚೇರಿ ಅಧೀಕ್ಷಕರಾದ ಎಂಎA ದಫೇದಾರ ಸಿ ಡಿ ಪಿ ಓ ಕಚೇರಿಯ ಅಧೀಕ್ಷಕರಾದ ಬೋರಮ್ಮ ಬಿರಾದಾರ ಸಮಾಜದ ಮುಖಂಡರುಗಳಾದ ಬಸವರಾಜ ಭಜಂತ್ರಿ ಸೀತಾರಾಮ ಭಜಂತ್ರಿ ಸಿದ್ದರಾಮ ಭಜಂತ್ರಿ ಮೊದಲಾದವರು ಭಾಗವಹಿಸಿದ್ದರು
ವೀರೇಶ ಗೂಡ್ಲಮನಿ ಕಾರ್ಯಕ್ರಮ ನಿರೂಪಿಸಿದರು ಮಂಜುನಾಥ ಹಳ್ಳೂರ ವಂದಿಸಿದರು