ಮುಡಾ ಹಗರಣ ಬಿಜೆಪಿ, ಜೆಡಿಎಸ್ ಷಡ್ಯಂತ್ರ
ಕೋಲಾರ,ಆ. ೨೦: ಮುಡಾ ಹಗರಣ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಷಡ್ಯಾಂತ್ರವಾಗಿದೆ. ಇದೊಂದು ಹಳೆಯ ಪ್ರಕರಣ ಇದೆಲ್ಲಾ ಬಿಜೆಪಿ ಸರ್ಕಾರದಲ್ಲಿ ನಡೆದಿರುವುದು ಹೊರತಾಗಿ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ನಡೆದಿರುವುದಿಲ್ಲ. ಅವರು ಏನೆ ಕುತಂತ್ರ ಮಾಡಿದರೂ ರಾಜ್ಯದ ಜನತೆ ಸಿದ್ದರಾಮಯ್ಯನವರ ಜೊತೆಯಲ್ಲಿದೆ. ೧೩೬ ಕ್ಷೇತ್ರದ ಶಾಸಕರು ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರ ಬೆನ್ನಿಗೆ ನಿಂತಿದೆ ಎಂದು ರಾಜ್ಯದ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ನಸ್ಸೀರ್ ಆಹಮದ್ ತಿಳಿಸಿದರು,
ನಗರದ ಮೆಕ್ಕೆವೃತ್ತದಲ್ಲಿ ಜಿಲ್ಲಾ ಕಾಂಗ್ರೇಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು ನೊರಾರು ಸಂಖ್ಯೆಯಲ್ಲಿ ಸಂಘಟಿತರಾಗಿ ಪಾದ ಯಾತ್ರೆ ಮೂಲಕ ಮೆಕ್ಕೆವೃತ್ತಕ್ಕೆ ಅಗಮಿಸಿ ಮಾನವ ಸರಪಳಿ ರಚಿಸಿ ಕೆಲ ಕಾಲ ರಸ್ತೆ ತಡೆಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಸಿದ್ದರಾಮಯ್ಯನವರ ಚುನಾವಣೆಗೆ ಮುನ್ನ ಬಡಜನತೆಯ ಪರವಾಗಿ ಘೋಷಿಸಿದ ೫ ಗ್ಯಾರೆಂಟಿಗಳ ಜನಪ್ರಿಯತೆ ಸಹಿಸಲಾಗದೆ ಮುಂಬರಲಿರುವ ಪಂಚಾತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉಂಟಾಗಲಿರುವ ಮುಖಭಂಗದಿಂದ ಜಾರಿ ಕೊಳ್ಳಲು ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಅರೋಪಗಳನ್ನು ಮಾತಿ ಜನತೆಯ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಅದರೆ ಜನತೆಗೆ ಸಿದ್ದರಾಮಯ್ಯನವರ ಆಡಳಿತದ ಮೇಲೆ ವಿಶ್ವಾಸವಿದೆ ಎಂದರು.
ಮಾಲೂರು ಶಾಸಕ ನಂಜೇಗೌಡ ಮಾತನಾಡಿ ಸಿದ್ದರಾಮಣ್ಣನವರ ಕಳೆದ ೪೫ ವರ್ಷಗಳ ಆಡಳಿತದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪ್ರಮಾಣಿಕವಾಗಿ ಆಡಳಿತ ನಡೆಸಿದ್ದಾರೆ. ಇವರ ಜನ ಪರ ಆಡಳಿತವನ್ನು ಎದುರಿಸಲಾಗದೆ ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷವು ಕಳೆದ ೨೦-೨೫ ವರ್ಷಗಳ ಹಿಂದಿನ ಪ್ರಕರಣಗಳಿಗೆ ಬಣ್ಣಕಟ್ಟಿ ಸಿದ್ದರಾಮಯ್ಯನವರ ಮೇಲೆ ಸುಳ್ಳು ಅರೋಪಗಳ ಕುತಂತ್ರಗಳನ್ನು ಹೊಡಿ ಜನತೆಯನ್ನು ದಿಕ್ಕು ತಪ್ಪಿಸುವಂತ ಹೀನಾಯ ಕೃತ್ಯಕ್ಕೆ ಮುಂದಾಗಿರುವುದನ್ನು ರಾಜ್ಯದ ಜನತೆ ಖಂಡಿಸಿ ಇಡೀ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಸಲಾಗುತ್ತಿದೆ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ನಾವು ನ್ಯಾಯ ಕೇಳಲು ಬಂದಿದ್ದೇವೆ, ಪವಿತ್ರವಾದ ರಾಜಭವನವು ಇಂದು ಕೇಂದ್ರ ಸರ್ಕಾರದ ಒತ್ತಡದ ಪರಿಣಾಮವಾಗಿ ಬಿಜೆಪಿ ಭವನವಾಗಿ ಪರಿವರ್ತನೆಯಾಗಿದೆ. ರಾಜ್ಯಪಾಲರ ಭವನದ ಫಲಕವನ್ನು ಬದಲಾಯಿಸಿ ಬಿಜೆಪಿ ಭವನವೆಂದು ಹಾಕಿದರೆ ಅರ್ಥಪೂರ್ಣವಾಗಿರುತ್ತೆ ಎಂದು ವ್ಯಂಗವಾಡಿದರು,
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರ್‍ಬಳಿಸಿ ಕೊಂಡಿರುವ ಪರಮಾವಧಿಯಾಗಿದೆ ಎಂದು ಕಿಡಿ ಕಾರಿದರು,
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ವಕ್ತಾರ ದಯಾನಂದ್, ನಗರಸಭೆ ಸದಸ್ಯ ಅಂಬರೀಷ್, ಮಾಜಿ ಸದಸ್ಯ ಸಿ.ಸೋಮಶೇಖರ್, ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಮೈಲಂಡಹಳ್ಳಿ ಮುರಳಿ, ಸೀಸಂದ್ರ ಗೋಪಾಲ್, ಕುಡಾ ಅಧ್ಯಕ್ಷ ಮಹ್ಮದ್ ಅನಿಫ್ ಮಾಡಿ ಅಧ್ಯಕ್ಷ ಅಬ್ದುಲ್ ಖಯ್ಯೊಂ, ಕೋಚಿಮುಲ್ ನಿರ್ದೇಶಕ ಷರೀಫ್, ಜಫ್ರುಲ್ಲಾ, ಷಂಶುದ್ದೀನ್ ಬಾಬು,ಬಾಬಾಜಾನ್. ಷಫಿಯುಲ್ಲಾ, ಮುಳಬಾಗಿಲಿನ ಅದಿನಾರಾಯಣ, ಆಲಂಗೂರು ಶಿವಣ್ಣ, ನೀಲಕಂಠೇಗೌಡ, ಮಾಲೂರು ಅಂಜನಿ ಸೋಮಣ್ಣ, ಶ್ರೀನಿವಾಸಪುರ ಬೈಚಪ್ಪ. ಕೋಲಾರದ ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ,ವೈ ಶಿವಕುಮಾರ್, ಪ್ರಸಾದ್ ಬಾಬು, ಜಯದೇವ, ಹಾರೋಹಳ್ಳಿ ಬಾಬು, ಸುದೀರ್, ಮಮತಾರೆಡ್ಡಿ, ಕೀಲುಕೋಟೆ ಜಯಕೃಷ್ಣ(ಜೆ.ಕೆ.) ಯುವಕಾಂಗ್ರೇಸ್ ಭರತ್‌ರಾಯ್,ಬಾಲು,ಅಮರನಾಥ್, ವಿಶ್ವನಾಥ್, ತರುಣ್, ಮುಂತಾದವರು ಬಾಗವಹಿಸಿದ್ದರು,