ನಾಳೆ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರಧಾನ
ತಾಳಿಕೋಟೆ:ಆ.೨೦: ಕರ್ನಾಟಕ ಮಾಧ್ಯಮ ಒಕ್ಕೂಟ ಬೆಂಗಳೂರ, ವಿಜಯಪುರ ಜಿಲ್ಲಾ ಘಟಕ, ಹಾಗೂ ಮುದ್ದೇಬಿಹಾಳ, ತಾಳಿಕೋಟೆ ಅವಳಿ ತಾಲೂಕಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಹಾಗೂ ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರಧಾನ ಸಮಾರಂಭವು ಇದೇ ದಿ.೨೧ ಬುಧವಾರರಂದು ಮುದ್ದೇಬಿಹಾಳ ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಅವರು ತಿಳಿಸಿದರು.
ಸೋಮವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಅಂದು ಬೆಳಿಗ್ಗೆ ೧೧ ಗಂಟೆಗೆ ಮುದ್ದೇಬಿಹಾಳ ಪಟ್ಟಣದ ಉಡ್ಕೋ ಹತ್ತಿರವಿರುವ ಟಾಪ್-ಇನ್ ಟೌನ್ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ಈ ಪ್ರಶಸ್ತಿ ಪ್ರಧಾನ ಸಮಾರಂಭದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಮೂಲ ಸೌಕರ್ಯಗಳ ಅಭಿವೃದ್ದಿ ಇಲಾಖೆ ಸಚಿವರಾದ ಎಂ.ಬಿ.ಪಾಟೀಲ ಅವರು ನೇರವೇರಸಲಿದ್ದಾರೆಂದು ತಿಳಿಸಿದರು.
ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರು ನೆರವೇರಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ ಅವರು ವಹಿಸಲಿದ್ದಾರೆ ಸಾಧಕರಿಗೆ ಸನ್ಮಾನ ಪ್ರತಿಭಾ ಪುರಸ್ಕಾರವನ್ನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿಗಳಾದ ಶ್ರೀಮತಿ ತುಳಸಿಮಾಲಾ ಅವರು ನೆರವೇರಿಸಲಿದ್ದಾರೆಂದು ಅಧ್ಯಕ್ಷ ನಾರಾಯಣ ಮಾಯಾಚಾರಿ ಅವರು ತಿಳಿಸಿದರು.
ನೂತನ ದಿನಪತ್ರಿಕೆಗಳಾದ ಉದಯ ಕನ್ನಡ ಹಾಗೂ ಬೆಂಕಿ ಚಂಡು ಸಂಜೆ ದಿನಪತ್ರಿಕೆಗಳ ಲೋಕಾರ್ಪಣೆಯನ್ನು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಯರಗಲ್ಲ-ಮದರಿ ಬಾಲಾಜಿ ಶೂರ‍್ಸ್ ಅಧ್ಯಕ್ಷ ಹನುಮಂತಗೌಡ ಪಾಟೀಲ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಒಕ್ಕೂಟದ ಗೌರವಾಧ್ಯಕ್ಷ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಶಾಂತಗೌಡ ಪಾಟೀಲ(ನಡಹಳ್ಳಿ),ಅವರು ಆಗಮಿಸಲಿದ್ದಾರೆಂದು ಅವರು ತಿಳಿಸಿದರು.
ವಿಶೇಷ ಆಮಂತ್ರಿತರಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ ಭಗವಾನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ದೊಡಮನಿ, ಹುಬ್ಬಳ್ಳಿ-ಧಾರವಾಡ ಮಹಾ ನಗರ ಪಾಲಿಕೆಯ ವಲಯ ಉಪ ಆಯುಕ್ತರಾದ ಅರವಿಂದ ಜಮಖಂಡಿ, ತಾಲೂಕಾ ತಹಶಿಲ್ದಾರ ಬಲರಾಮ ಕಟ್ಟಿಮನಿ, ಕನ್ನಡಪ್ರಭ ಬೆಳಗಾವಿ ಸ್ಥಾನಿಕ ಸಂಪಾದಕರಾದ ಬ್ರಹ್ಮಾನಂದ ಹಡಗಲಿ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕರಾದ ವಾಸುದೇವ ಹೆರಕಲ್, ಹಾಗೂ ಸತೀಶ ಓಸ್ವಾಲ, ಪ್ರಭುರಾಜ ಕಲಬುರ್ಗಿ, ವೈ.ಎಚ್.ವಿಜಯಕರ, ಸಿಕಂದರ ಜಾನ್ವೇಕರ ಒಳಗೊಂಡು ಮೊದಲಾದವರು ಆಗಮಿಸಲಿದ್ದಾರೆಂದು ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿ.ಡಾ.ನಾಗರಾಜ ಜಮಖಂಡಿ ಸ್ಮರಣಾರ್ಥ ಜಮಖಂಡಿ ಪರಿವಾರ ಸಮಾಜ ಸೇವಾ ಪ್ರತಿಷ್ಠಾನ ಹಾಗೂ ಡಾ.ನಾಗರಾಜ ಜಮಖಂಡಿ ಮೆಮೂರಿಯಲ್ ಟ್ರಸ್ಟ ಬೆಂಗಳೂರ ಅವರ ವತಿಯಿಂದ ಕೊಡಮಾಡಲಾಗುವ ರಾಜ್ಯಮಟ್ಟದ ಮಾಧ್ಯಮ ಸಾಧಕ ಪ್ರಶಸ್ತಿ ಒಳಗೊಂಡAತೆ ಒಕ್ಕೂಟದಿಂದ ರಾಜ್ಯಮಟ್ಟದ ಜೀವಮಾನ ಮಾಧ್ಯಮ ಸಾಧಕ ಪ್ರಶಸ್ತಿ, ಮಾಧ್ಯಮ ರತ್ನ ಪ್ರಶಸ್ತಿ, ವಿನ್ಯಾಸಭೂಷಣ ಪ್ರಶಸ್ತಿ, ಅತ್ಯುತ್ತಮ ಪತ್ರಿಕಾ ವಿತರಕ ಪ್ರಶಸ್ತಿ ಒಳಗೊಂಡು ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ ಎಂದು ಅವರು ತಿಳಿಸಿದರು.
ಇದೇ ಸಮಯದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ೧೨ ಜನ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ ಅವರು ತಿಳಿಸಿದರು.
ಈ ಸಮಯದಲ್ಲಿ ಕರ್ನಾಟಕ ಮಾಧ್ಯಮ ಒಕ್ಕೂಟದ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ಪರಶುರಾಮ ಕೊಣ್ಣೂರ, ತಾಳಿಕೋಟೆ ತಾಲೂಕಾ ಅಧ್ಯಕ್ಷ ಅಂಬಾಜಿ ಘೋರ್ಪಡೆ, ಸತೀಶ ಚಲವಾದಿ, ಚಂದ್ರು ಮೂಕೀಹಾಳ, ಬಸವರಾಜ ಯಂಕAಚಿ, ರವಿ ಕುಂಭಾರ, ಮೊದಲಾದವರು ಇದ್ದರು.