ಕೆಬಿಜೆಎನ್ ಎಲ್ ಆಸ್ತಿ ಖಾಸಗಿ ವ್ಯಕ್ತಿಗಳಿಂದ ಪರಬಾರೆ ಸೂಕ್ತ ಕ್ರಮಕ್ಕಾಗಿ ಆಗ್ರಹ
ಸಂಜೆವಾಣಿ ವಾರ್ತೆ
ಕೆಂಭಾವಿ:ಆ.೨೦:ಪಟ್ಟಣದಲ್ಲಿನ ಕೆಬಿಜೆಎನ್ ಎಲ್ ಗೆ ಸಂಬAಧಿಸಿದ ಆಸ್ತಿಯನ್ನು ಪಟ್ಟಣದಲ್ಲಿನ ಕೆಲ ಖಾಸಗಿ ವ್ಯಕ್ತಿಗಳು ಕಬ್ಜಾ ಮಾಡಿಕೊಳ್ಳುತಿದ್ದು ಅಂತಹ ಆಸ್ತಿಯ ಮಾಲಿಕರ ಮೇಲೆ ಮತ್ತು ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹೋಬಳಿ ಘಟಕದ ಅಧ್ಯಕ್ಷರಾದ ಪರಶುರಾಮ ಬೋನ್ಹಾಳ ಆಗ್ರಹಿಸಿದ್ದಾರೆ.ಈ ಕುರಿತು ಕೃಭಾಜನಿನಿ ಕಾಲುವೆ ವಲಯ-೨ ರಾಂಪುರದ ಅಭಿಯಂತರರಿಗೆ ಮನವಿ ಸಲ್ಲಿಸಿರುವ ಅವರು ಪಟ್ಟಣದಲ್ಲಿ ಕೆಬಿಜೆಎನ್ ಎಲ್ ಗೆ ಆಸ್ತಿಯಿದ್ದು ಇದರ ಆಸ್ತಿಯಲ್ಲಿ ಅಕ್ರಮವಾಗಿ ಪರಬಾರೆ ಮಾಡಿಕೊಂಡು ಬೆಳೆ ಬೆಳೆಯುತಿದ್ದು ಅದಲ್ಲದೆ ಜಮೀನಿನ ಮಣ್ಣನ್ನು ಕೂಡಾ ಅಧಿಕಾರಿಗಳು ಮಾರಾಟ ಮಾಡುತಿದ್ದಾರೆ.ಅಕ್ರಮ ಶೆಡ್ಡುಗಳನ್ನು ನಿರ್ಮಿಸಿಕೊಂಡು ಹಲವು ಸರ್ವೆ ನಂಬರಗಳಲ್ಲಿ ರಾಜಾರೋಷವಾಗಿ ಮಣ್ಣು ಮಾರಾಟ ಮಾಡುತಿದ್ದಾರೆ.ಇಂತಹ ಅಧಿಕಾರಗಳಮತ್ತು ಜಮೀನನ್ನು ಪರಭಾರೆ ಮಾಡಿಕೊಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಚೇರಿಯ ಮುಂದೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸೇನೆಯ ಉಪಾಧ್ಯಕ್ಷ ರವಿ ಮಾಳ್ಳಳ್ಳಿಕರ, ರಾಮು ಯಾಳಗಿ,ಪರಶುರಾಮ ಕಟ್ಟಿಮನಿ,ಸಾಬಣ್ಣ ಚನ್ನೂರ,ಶ್ರೀಕಾಂತ ಮೋಪಗಾರ,ಸೇರಿದಂತೆ ಅನೇಕರಿದ್ದರು.