ನೂಲಿಚಂದಯ್ಯನವರ ಜಯಂತ್ಯೋತ್ಸವ ಆಚರಣೆ
ತಾಳಿಕೋಟೆ:ಆ.೨೦:ಪಟ್ಟಣದ ಕೊರವ ಭಜಂತ್ರಿ ಸಮಾಜ ಬಾಂದವರ ವತಿಯಿಂದ ೧೨ನೇ ಶತಮಾನದ ಬಸವಣ್ಣನವರ ಸಮಕಾಲಿನವರಾದ ಶ್ರೇಷ್ಠ ವಚನ ಕಾಯಕಯೋಗಿ ನೂಲಿ ಚಂದಯ್ಯನವರ ೯೧೭ನೇ ಜಯಂತ್ಯೋತ್ಸವವನ್ನು ಭಕ್ತಿಭಾವದೊಂದಿಗೆ ಸೋಮವಾರರಂದು ಆಚರಿಸಲಾಯಿತು.
ಪಟ್ಟಣದ ನೂಲಿಚಂದಯ್ಯನವರ ವೃತ್ತದಲ್ಲಿ ಕೊರವ-ಭಜಂತ್ರಿ ಸಮಾಜಬಾಂದವರು, ಮಹಿಳೆಯರು, ಯುವಕರು ಶ್ರೀ ಶಿವಶರಣ ನೂಲಿಚಂದಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ವಿತರಿಸಲಾಯಿತು.
ಈ ಸಮಯದಲ್ಲಿ ಸಮಾಜದ ಮುಖಂಡರುಗಳಾದ ಭೀಮಣ್ಣ ಭಜಂತ್ರಿ, ಲಕ್ಷö್ಮಣ ಭಜಂತ್ರಿ, ತಗೆಪ್ಪ ಭಜಂತ್ರಿ, ನಿಂಗಪ್ಪ ಭಜಂತ್ರಿ, ನಾಗರಾಜ ಭಜಂತ್ರಿ, ಮುದಕಪ್ಪ ಭಜಂತ್ರಿ, ಉಲ್ಲಾಸ ಭಜಂತ್ರಿ, ಹಣಮಂತ ಭಜಂತ್ರಿ, ರಾಮಪ್ಪ ಭಜಂತ್ರಿ, ಬಸಪ್ಪ ಭಜಂತ್ರಿ, ತಿಮ್ಮಣ್ಣ ಭಜಂತ್ರಿ ಯೊಳಗೊಂಡು ಮೊದಲಾದವರು ಇದ್ದರು.