ರಕ್ಷಾಬಂಧನ ಆಚರಿಸಿದ ಶಾಂತಿನಿಕೇತನ ಶಾಲೆ ಮಕ್ಕಳು
ವಿಜಯಪುರ:ಆ.೨೦:ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳು ರಕ್ಷಾಬಂಧನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಶ್ರೀ ಶ್ರೀಧರ ಕುರಬೆಟರವರು ಎಲ್ಲ ವಿದ್ಯಾರ್ಥಿಗಳಿಗೆ ರಕ್ಷಾಬಂಧನ ಹಬ್ಬದ ಶುಭಾಶಯವನ್ನು ಕೋರಿದರು. ಶಾಲೆಯ ವಿದ್ಯಾರ್ಥಿನಿಯರು ಎಲ್ಲ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದರು ನಂತರ ಎಲ್ಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ವಿದ್ಯಾರ್ಥಿಗಳು ಸಹೋದರತ್ವ ಸಾರುವ ಕಿರು ನಾಟಕವನ್ನು ಮಾಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸೈನಿಕ ಶಾಲೆಗೆ ಹೋಗಿ, ಅಲ್ಲಿಯ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದರು.
ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ.ಎಚ್.ಸಗರ, ಅಶ್ವಿನ, ಸುರೇಖಾ, ಶ್ರೀದೇವಿ, ಉಮಾ ಮೂಡಲಗಿ,ತಬಸುಮ,ಹೀನಾ,ಸೀಮಾ,ದೀಪಾ,ಶ್ವೇತಾ, ಶಶಿಧರ ಲೋನಾರಮಠ, ಮುಂತಾದವರು ಉಪಸ್ಥಿತರಿದ್ದರು.