ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ರೇಖಾ ಬಾರ್ಕಿ
ವಿಜಯಪುರ :ಆ.೨೦: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಇತ್ತಿಚೆಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಶೈಕ್ಷಣಿಕ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ತಿಕೋಟಾ ತಾಲೂಕಿನ ಅರಕೇರಿಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರಾದ ಕುಮಾರಿ ರೇಖಾ ಬಾರ್ಕಿ ಅವರಿಗೆ ಲಭಿಸಿದೆ.
ಮೂಲತಃ ಬೆಳಗಾವಿಯ ಯರಗಟ್ಟಿ ತಾಲೂಕಿನ ತಲ್ಲೂರಿನವರಾದ ಇವರು ೨೦೧೬ ರಿಂದ ಕೆಪಿಎಸ್‌ಸಿ ಮೂಲಕ ಪ್ರಾಂಶುಪಾಲರ ಹುದ್ದೆಗೆ ಆಯ್ಕೆಯಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಬರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅರಕೇರಿಯಲ್ಲಿ ೨೦೦೭-೦೮ ರಿಂದ ಸ್ಥಾಪಿತವಾದ ಈ ಶಾಲೆಯ ರಾಜ್ಯಪಠ್ಯಕ್ರಮ ಅನುಸರಿಕೊಂಡು ಬಂದು ಸತತವಾಗಿ ೧೦೦% ಪ್ರತಿ ವರ್ಷ ಫಲಿತಾಂಶವನ್ನು ನೀಡಿದೆ. ಪ್ರಸ್ತುತ ೨೦೨೨-೨೩ನೇ ಶೈಕ್ಷಣಿಕ ಸಾಲಿನಿಂದ ಕೇಂದ್ರ ಪಠ್ಯಕ್ರಮಕ್ಕೆ ಸೇರ್ಪಡೆಗೊಂಡಿತು. ನಂತರ ಡಾ. ಎಪಿಜೆ ಶಾಲೆಯಂದು ೨೦೨೩-೨೪ನೇ ಶೈಕ್ಷಣಿಕ ಸಾಲಿನಲ್ಲಿ ೧೦ನೇ ತರಗತಿಯನ್ನು (ಸಿಬಿಎಸ್‌ಇ) ೧೦೦% ಫಲಿತಾಂಶವನ್ನು ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿಯೇ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಇಂದು ಈ ಶಾಲೆಯ ರಾಜ್ಯಪಠ್ಯಕ್ರಮಕ್ಕು ಸೈ ಕೇಂದ್ರ ಪಠ್ಯಕ್ರಮಕ್ಕೂ ಸೈ ಎನ್ನುವಂತೆ ರಾಜ್ಯದಲ್ಲಿಯೇ ಮಾದರಿ ಶಾಲೆಯನ್ನಾಗಿ ಪರಿವರ್ತಿಸುವಲ್ಲಿ ಪ್ರಾಂಶುಪಾಲರ ಪರಿಶ್ರಮ ಎದ್ದು ಕಾಣುತ್ತದೆ.
ಇವರ ಕಾರ್ಯವೈಖರಿಯನ್ನು ಗಮನಿಸಿದ ಇಲಾಖೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಂiÀiðಕ್ರಮದಲ್ಲಿ ವಸತಿ ಹಾಗೂ ವಕ್ಫ & ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಬಿ.ಝಡ್. ಜಮೀರ ಅಹ್ಮದಖಾನ ರವರು ಕು. ರೇಖಾ ಬಾರ್ಕಿಯವರಿಗೆ ರಾಜ್ಯಮಟ್ಟದ ಅತ್ಯುತ್ತಮ ಪ್ರಾಂಶುಪಾಲರು ಎಂದು ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿ ಸನ್ಮಾನಿಸಿದರು.
ರಾಜ್ಯದಲ್ಲಿಯೇ ನನ್ನ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ಮಾಡುವ ನನ್ನ ಕನಸು ಸಾಕಾರಗೊಂಡಿದೆ ಇದಕ್ಕೆ ನನ್ನ ಬೆನ್ನೆಲುಬಾಗಿ ಬೋಧಕ ಸಿಬ್ಬಂದಿ & ಬೋಧಕೇತರ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಕೈಗೊಡಿದೆ. ಇದಕ್ಕೆ ಇವರಿಗೆಲ್ಲ ಚಿರಋಣಿಯಾಗಿರುತ್ತೇನೆ.
ಪ್ರಥಮ ಬಾರಿಗೆ ಇಲಾಖೆಯಲ್ಲಿ ನೀಡಿರುವ ಅತ್ಯುತ್ತಮ ಪ್ರಾಂಶುಪಾಲರು ಪ್ರಶಸ್ತಿಗೆ ನಾನು ಆಯ್ಕೆಗೊಂಡಿರುವದು ಖುಷಿ ತಂದಿದೆ.
ವಿಜಯಪುರ ಜಿಲ್ಲೆಯ ಪ್ರಸ್ತುತ ಜಿಲ್ಲಾಧಿಕಾರಿಗಳಾಗಿರುವ ಟಿ. ಭೂಬಾಲನ್ ಅವರುಗಳು ಈಶಾಲೆಯ ಸಾಧನೆಯ ಬಗ್ಗೆ ಮನದುಂಬಿ ಹರ್ಷವನ್ನು ವ್ಯಕ್ತಪಡಿಸಿ, ೭೮ನೇ ಸ್ವಾತಂತ್ರö್ಯ ದಿನಾಚರಣೆಯ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಡಳಿತ ವತಿಯಿಂದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಭಾರಿ ಹಾಗೂ ಮಾಧ್ಯಮ ಕೈಗಾರಿಕಾ ಸಚಿವರಾಗಿರುವ ಎಂ.ಬಿ. ಪಾಟೀಲ ರವರು ಇವರ ಕಾರ್ಯವನ್ನು ಮೆಚ್ಚಿ ಶೈಕ್ಷಣಿಕ ಸಾಧಕರು ಎಂದು ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ.
ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿಯೆ ಅತ್ಯುತ್ತಮ ಪ್ರಾಂಶುಪಾಲರು ಪ್ರಶಸ್ತಿಗೆ ಬಾಜನರಾಗಿರುವ ಕು. ರೇಖಾ ಬಾರ್ಕಿಯವರಿಗೆ ಅಭಿನಂದನೆಗಳು ಕಠಿಣ ಪರಿಶ್ರಮ ಮತ್ತು ಕ್ರಿಯಾಶೀಲರಾಗಿರುವ ಪ್ರಾಂಶುಪಾಲರಿಗೆ ಈ ಪ್ರಶಸ್ತಿ ಸಿಕ್ಕಿದ್ದು ನಮ್ಮ ಹೆಮ್ಮೆ ಇವರ ಸೇವೆ ಹೀಗೆ ನಮ್ಮ ಇಲಾಖೆಯಲ್ಲಿ ಮುಂದುವರೆದು ಇತರರಿಗೂ ಮಾದರಿಯಾಗಲಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರದ ಜಿಲ್ಲಾಧಿಕಾರಿಗಳು ಪ್ರಶಾಂತ ಪೂಜಾರಿಯವರು ತಿಳಿಸಿರುತ್ತಾರೆ.