ಕಾಯಕ-ದಾಸೋಹ ನಿಷ್ಠೆಯ ವಚನಕಾರ ನುಲಿಯ ಚಂದಯ್ಯ:ಸAತೋಷ ಬಂಡೆ
ಇAಡಿ:ಆ.೨೦: ಬಸವಣ್ಣನವರ ಸಾಮಾಜಿಕ ಸಮಾನತೆಯ ವಿಚಾರ ಧಾರೆ, ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ತೆರಳಿ ಕಾಯಕ ಜೀವಿಯಾಗಿ, ದಾಸೋಹ ಮಾಡುತ್ತ ಬದುಕಿದ್ದ ನುಲಿಯ ಚಂದಯ್ಯನವರು ಹೆಮ್ಮೆಯ ವಚನಕಾರರಾಗಿದ್ದರು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ನುಲಿ ಚಂದಯ್ಯನವರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
೧೨ನೇ ಶತಮಾನದಲ್ಲಿದ್ದ ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭಾವಿ ಶರಣ ನುಲಿಯ ಚಂದಯ್ಯನವರು ತಮ್ಮ ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯವನ್ನು ಸಾರುತ್ತಾ, ನುಡಿದಂತೆ ನಡೆದ ಶ್ರೇಷ್ಠ ವಚನಕಾರರಾಗಿದ್ದರು ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಚಂದೇಶ್ವರಲಿAಗ ಎಂಬ ಅಂಕಿತನಾಮದಲ್ಲಿ ರಚಿಸಿದ ೪೮ ವಚನಗಳಲ್ಲಿ ಅವರ ನಡೆ ನುಡಿ ಕಾಯಕನಿಷ್ಠೆಗೆ ನೀಡಿದ ಮಹತ್ವ ಅರ್ಥವಾಗುತ್ತದೆ. ಅವರು ಬಹುಮುಖ ವ್ಯಕ್ತಿತ್ವದ ಹಠಯೋಗಿಯ ಶರಣರಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ತಾನು ಕೂಡ ಕಾಯಕ ನಿರತನಾಗಿ ಪ್ರತಿನಿತ್ಯದ ಅನ್ನವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಚಂದಯ್ಯನವರದಾಗಿತ್ತು ಎಂದು ಹೇಳಿದರು.
ಮುಖ್ಯ ಶಿಕ್ಷಕರಾದ ವ್ಹಿ ವೈ ಪತ್ತಾರ, ಎಸ್ ಎಸ್ ಅರಬ, ಶಿಕ್ಷಕರಾದ ಎಸ್ ಎಂ ಪಂಚಮುಖಿ, ಎಸ್ ಪಿ ಪೂಜಾರಿ, ಎನ್ ಬಿ ಚೌಧರಿ, ಜೆ ಸಿ ಗುಣಕಿ,ಎಸ್ ಎನ್ ಡಂಗಿ, ಜೆ ಎಂ ಪತಂಗಿ, ಸಾವಿತ್ರಿ ಸಂಗಮದ ಸೇರಿದಂತೆ ಅತಿಥಿ ಶಿಕ್ಷಕರಾದ ಯಲ್ಲಮ್ಮ ಸಾಲೋಟಗಿ, ಪ್ರಜ್ವಲ ಕುಲಕರ್ಣಿ ಉಪಸ್ಥಿತರಿದ್ದರು.