ಆ.೨೧ ನೃಪತುಂಗ ವಿಶ್ವವಿದ್ಯಾಲಯ ಪ್ರಥಮ ಘಟಿಕೋತ್ಸವ
ಬೆಂಗಳೂರು. ಆ.೧೯- ನೃಪತುಂಗ ವಿಶ್ವವಿದ್ಯಾಲಯ ತನ್ನ ಪ್ರಥಮ ಘಟಿಕೋತ್ಸವ ಆ.೨೧ ರಂದು ನಡೆಯಲಿದೆ.
ನಗರದ ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಹಿಸಲಿದ್ದಾರೆ. ವಿಶ್ವವಿದ್ಯಾಲಯದ ಅನುದಾನದ ಆಯೋಗದ ಅಧ್ಯಕ್ಷರಾದ ಪ್ರೊ.ಎಂ.ಜಗದೀಶ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ನೃಪತುಂಗ ವಿಶ್ವವಿದ್ಯಾಲಯದ ಸಮಕುಲಾಧಿಪತಿಯಾಗಿರುವ ಡಾ.ಎಂ.ಸಿ. ಸುಧಾಕರ್ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಚೊಚ್ಚಲ ಘಟಿಕೋತ್ಸವದಲ್ಲಿ ಬಾಹ್ಯಾಕಾಶ ವಿಜ್ಞಾನಿ ಮತ್ತು ಚಂದ್ರಯಾನದಲ್ಲಿ ಅಮೋಘ ಕೊಡುಗೆಗೆಗಳನ್ನು ನೀಡಿರುವ ಇಸ್ರೋ ವಿಜ್ಞಾನಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂತ್ ಮುವ್‌ಮೆಂಟ್‌ನ ಡಾ. ಬಾಲಸುಬ್ರಮಣಿಯನ್ ಮತ್ತು ಇನ್ಫೋಸಿಸ್‌ನ ದಿನೇಶ್ ಅವರಿಗೆ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ.
೨೦೨೦-೨೨ರ ಸಾಲಿನ ೧೬೯ ಮತ್ತು ೨೦೨೧-೨೩ ಸಾಲಿನ ೧೬೯ ಹೀಗೆ ಒಟ್ಟು ೩೩೮ ಸ್ನಾತಕೋತರ ಪದವಿಧರರಿಗೆ ಮತ್ತು ೨೦೨೦-೨೩ರ ೪೫೪ ಸ್ನಾರಕ ಪದವಿಧರರಿಗೆ ಮೊಲದ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಗುತ್ತದೆ.
ಪ್ರಥಮ ಘಟಿಕೋತ್ಸವ ಹಿನ್ನಲೆಯಲ್ಲಿ ನೃಪತುಂಗ ವಿಶ್ವವಿದ್ಯಾಲಯದ ಕುಲತಪತಿ ಪ್ರೊ. ಶ್ರೀನಿವಾಸ್ ಎಸ್.ಬಳ್ಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕುಲಸಚಿವರಾದ
ಶಿವಾನಂದ ಬ. ಕರಾಳೆ ಮತ್ತು ಪ್ರೊ. ಎ.ಸಿ ಮಂಜುಳಾ ಕುಲಸಚವರು (ಮೌಲ್ಯಮಾಪನ) ಇದ್ದಾರೆ.