ನೂಲಿಗೆ ಚಂದಯ್ಯನವರ ಕೊಡುಗೆ ಅನನ್ಯ
ಕಲಬುರಗಿ: ಆ.19:ಹನ್ನೆರಡನೇ ಶತಮಾನದಲ್ಲಿ ತಮ್ಮ ಭಕ್ತಿ, ಕಾಯಕ, ದಾಸೋಹ, ಅನುಭಾವ, ಸಮಾಜ ಸೇವೆಯ ಮೂಲಕ ಸಮಾಜ, ವಚನ ಸಾಹಿತ್ಯಕ್ಕೆ ನೂಲಿಗೆ ಚಂದಯ್ಯನವರು ನೀಡಿದ ಕೊಡುಗೆ ತುಂಬಾ ಅನನ್ಯವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಲಾಗಿದ್ದ ‘ಶರಣ ನೂಲಿಗೆ ಚಂದಯ್ಯನವರ 917ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಚಂದಯ್ಯನವರು ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದಲ್ಲಿ ಕಂಡುಬರುತ್ತಿದ್ದ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಅವರಲ್ಲಿರುವ ಸಾಮಾಜಿಕ ಕಾಳಜಿ ಮರೆಯುವಂತಿಲ್ಲ. ನೂಲಿನ ಕಾಯಕ ಮಾಡುತ್ತಿದ್ದರು. ಕಾಯಕದಲ್ಲಿ ಮೇಲು-ಕೀಳುವೆಂದು ಅವರು ಎಂದಿಗೂ ಕೂಡಾ ಭಾವಿಸದೇ, ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಕಂಪ್ಯೂಟರ ಶಿಕ್ಷಕಿ ನಿಲೋಫರ ಶೇಖ್, ಪ್ರಮುಖರಾದ ಮಹೇಶ್, ಮೈನೋದ್ದೀನ್, ಮಹಮ್ಮದ್ ಮಿರಜ್, ಗಾಯತ್ರಿ, ನೇಹಾ, ಐಶ್ವರ್ಯ ಸೇರಿದಂತೆ ಇನ್ನಿತರರಿದ್ದರು.