ಸಂಶೋಧನೆ ಮಾಡುವುದು ಅಷ್ಟೇನೂ ಸುಲಭವಲ್ಲ:ದಮ್ಮೂರಮಠ
ತಾಳಿಕೋಟೆ:ಆ.19: ಸಾಧನೆಗೆ ಹೆಜ್ಜೆ ಹೇಗೆ ಇಡಬೇಕೆಂಬುದನ್ನು ಇತ್ತಿಚಿಗೆ ಮಹತ್ವದ ಸಂಶೋಧನೆ ಮಾಡುವಂತಹ ಪ್ರಭಂಧವನ್ನು ಮಂಡಿಸಿ ಡಾಕ್ಟರೇಟ್ ಪಧವಿಯನ್ನು ಪಡೆದಂತಹ ಪ್ರವೀಣ್ ಸಿಂದಗಿ ಅವರಂತಹ ಸಂಶೋದನೆಯ ಕಾರ್ಯ ಅತೀವ ಮಹತ್ವದ್ದಾಗಿದೆ ಎಂದು ಪೀರಾಪೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಬಿ. ಧಮ್ಮೂರಮಠ ಅವರು ನುಡಿದರು.
ರವಿವಾರರಂದು ಸಂಶೋಧಕ ಡಾ. ಪ್ರವೀಣ್ ಅವರ ಗೆಳೆಯರ ಭಳಗ ಹಾಗೂ ಹಡಪದ ಅಪ್ಪಣ್ಣ ಸಮಾಜದ ಸಂಯುಕ್ತ ಆಶ್ರಯದಲ್ಲಿ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಮಾತನಾಡುತ್ತಿದ್ದ ಅವರು ಪ್ರವೀಣ್ ಸಿಂದಗಿ ಅವರು ಮಂಡಿಸಿದ ಪ್ರಭಂದ “ಟು ಕಂಟ್ರೋಲ್ ಹೈಪೋ ಗ್ಲಸಮಿಯಾ ಆಂಡ್ ಹೈಪರ್ ಟೆನ್ ಶನ್ ಯ್ಯೂಜಿಂಗ್ ಬ್ರೇನ್ ಆಸ್ ಎ ಬಯೋ ಸೆನ್ಸರ್” ಎಂಬುದು ಸಾಮಾನ್ಯವಲ್ಲಾ ವಿಜ್ಞಾನ ತಂತ್ರಜ್ಞಾನದಲ್ಲಿ ಹೊಸ ಆವಿಶ್ಕಾರದೊಂದಿಗೆ ಅಧ್ಬುತ ಕಾರ್ಯ ಮಾಡಿ ಸಾಧನೆ ತೋರಿದ್ದಾರೆಂದರು. ಹಣ ಸಂಪಾದನೆ ಮಾಡಬಹುದು ಆದರೆ ನಿರಂತರವಾಗಿ ಓದುವಿನೊಂದಿಗೆ ಸಂಶೋಧನೆ ಮಾಡುವುದು ಅಷ್ಟೇನು ಸುಲಭವಲ್ಲಾ ಪ್ರವೀಣ್ ಅವರ ಸಾಧನೆಯನ್ನು ಪರಿಗಣಿಸಿದ ಮಾತಾಪಿತರಿಗೆ ಆತ್ಮೀಯರಿಗೆ ಅವರಲ್ಲಿರತಕ್ಕಂತಹ ಬಾವುಕತನ, ಪ್ರೇಮ, ಹೇಳುವಂತಹದ್ದು ಎಲ್ಲರಿಗೂ ಸ್ಪೂರ್ತಿ ನೀಡುವಂತಹದ್ದಾಗಿದೆ ಎಂದರು.
ಇನ್ನೋರ್ವ ಅತಿಥಿ ಮುಂಬೈ ಸಿಪ್ಪಿಂಗ್ ಕಾರ್ಪೋರೇಶನ್ ದ ನಿರ್ದೇಶಕರಾದ ಶ್ರೀಕಾಂತ ಪತ್ತಾರ ಅವರು ಮಾತನಾಡಿ ಸಾಮಾನ್ಯ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಡಾಕ್ಟರೇಟ್ ಪದವಿ ಪಡೆದ ಡಾ. ಪ್ರವೀಣ್ ಅವರನ್ನು ಇಂದು ಸನ್ಮಾನಿಸಿ ಗೌರವಿಸಿರುವುದು ಅತೀವ ಸಂತಸ ತಂದಿದೆ ಪ್ರಾಥಮಿಕ ಶಿಕ್ಷಕರ ಮಗನಾಗಿ ಶಿಕ್ಷಣವನ್ನು ಮುಗಿಸಿದ ಇವರು ಮಾಡಿರುವ ಸಾಧನೆ ಪವಾಡದಿಂದ ಆದದ್ದಲ್ಲಾ ಅವರ ಅರ್ಹತೆಯ ಸಾಧನೆಯಿಂದ ಡಾಕ್ಟರೇಟ್ ಪದವಿ ದೊರೆಯಲು ಕಾರಣವಾಗಿದೆ ಎಂದರು. ಗಿಡ ಬೆಳೆದು ಹಣ್ಣು ಕೊಡುವಂತಹ ಕಾರ್ಯ ಅವರ ಮಾತಾಪಿತರು ಮಾಡಿದ್ದಾರೆ ಬಿಸಿಲು ಮಳೆ ಎಲ್ಲವನ್ನು ಉಂಡು ಫಲ ಕೊಡುವಂತಹ ಸಾಧನೆಯನ್ನು ಮಾಡಿದ್ದಾರೆ ಆ ಸಾಧನೆಯೇ ಸಂಶೋಧನೆಯ ಡಾಕ್ಟರೇಟ್ ಪದವಿ ಇದಾಗಿದೆ ಎಂದರು. ಪ್ರವೀಣ್ ಅವರನ್ನು ಲಕ್ಷ್ಮೀ ಪುತ್ರರನ್ನಾಗಿ ಮಾಡಿದ ಅವರ ತಂದೆ ಸಂಗಣ್ಣ ಸಿಂದಗಿ ಅವರು ಸರಸ್ವತಿ ಪುತ್ರರೆಂದು ಹೇಳಿದರೆ ತಪ್ಪಾಗಲಾರದು ಅಸಂಖ್ಯಾತ ಮಕ್ಕಳಿಗೆ ವಿದ್ಯಾದಾನ ಮಾಡಿದ ಸಂಗಣ್ಣ ಸರ್ ಅವರ ಸೇವಾ ಕಾರ್ಯ ಜನ ಮೆಚ್ಚುವಂತಹದ್ದಾಗಿದೆ ಜ್ಞಾನವೆಂಬುದು ಸಾಮಾನ್ಯವಲ್ಲಾ ಅದು ಎಲ್ಲಿಯೂ ಸಿಗುವಂತಹದ್ದಲ್ಲಾ ವಿಶೇಷ ಅಧ್ಯಯನ ಮಾಡಿದ್ದೇ ಪದವಿ ಲಭಿಸಲು ಕಾರಣವಾಗಿದೆ ಎಂದರು.
ಇನ್ನೋರ್ವ ಅತಿಥಿ ತಾ.ಪಂ. ಅಭಿಯಂತರರಾದ ಎ.ಬಿ.ರೆಡ್ಡಿ ಅವರು ಮಾತನಾಡಿ ಒಳ್ಳೆಯ ಫಲ ಕೊಡಲಿಕ್ಕೆ ಮುಖ್ಯ ಕಾರಣ ಮರವೆಂಬಂತೆ ಪ್ರವೀಣ್ ಅವರ ಸಾಧನೆಗೆ ಮರದಂತಿರುವ ಅವರ ಮಾತಾಪಿತರೇ ಕಾರಣೀಭೂತರಾಗಿದ್ದಾರೆಂದರು ಸಂಗಣ್ಣ ಸರ್ ಅವರ ಒಡನಾಟ ಕಳೆದ 40 ವರ್ಷಗಳಿಂದ ನನ್ನೊಂದಿಗಿದೆ ಈ ಹಿಂದಿನ ಸ್ಥಿತಿಗತಿಯನ್ನು ಅವಲೋಕಿಸಿದರೆ ಬಹಳೇ ಕಷ್ಟಕರವಾಗಿತ್ತೆಂದು ಹೇಳಿದ ರೆಡ್ಡಿ ಅವರು ಸಂಗಣ್ಣ ಸರ್ ಅವರು ಹಿಂದೆ ಅಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷಣದ ಫಲವೇ ತಮ್ಮ ಮಕ್ಕಳಿಗೆ ಲಭಿಸಿದೆ ಎಂದು ಅವರ ಆದರ್ಶಮಯವಾದ ಶಿಕ್ಷಣ ಕುರಿತು ಗುಣಗಾನ ಮಾಡಿದರು.
ಇನ್ನೋರ್ವ ಅತಿಥಿ ಹಿರಿಯಪತ್ರಕರ್ತ ಜಿ.ಟಿ. ಘೋರ್ಪಡೆ ಅವರು ಮಾತನಾಡಿ ಹಡಪದ ಅಪ್ಪಣ್ಣ ಸಮಾಜ ಬಾಂಧವರ ಒಡನಾಟ ಈ ಹಿಂದಿನಿಂದಲೂ ನನ್ನೊಂದಿಗಿದೆ ಆ ಸಮಾಜದವರು ಆದರ್ಶಪ್ರೀಯರು ಅಲ್ಪ ಸಮಾಜ ಹೊಂದಿದ್ದರೂ ಒಳ್ಳೆಯ ಗುಣ ಒಳ್ಳೆಯ ನಡತೆಯಿಂದ ಎಲ್ಲ ಸಮಾಜದವರಿಂದ ಸೈ ಎನಿಸಿಕೊಂಡವರಾಗಿದ್ದಾರೆ ಅಂತಹ ಸಮಾಜದವರು ಇಂದು ಡಾಕ್ಟರೇಟ್ ಪದವಿ ಪಡೆದ ಪ್ರವೀಣ್ ಸಿಂದಗಿ ಅವರನ್ನು ಸನ್ಮಾನಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದರು.
ಇನ್ನೋರ್ವ ಸಾಹಿತಿ ಅಶೋಕ ಹಂಚಲಿ ಅವರು ಮಾತನಾಡಿ ಡಾ.ಪ್ರವೀಣ್ ಅವರ ಸಾಧನೆ ಅವರ ಕುರಿತು ನಾನು ಇಂಟರನ್ಯಾಶನಲ್ ಮ್ಯಾಗ್ಜಿನ್ ನಲ್ಲಿ ಒದಿದ್ದೇನೆ ಪ್ರವೀಣ್ ಅವರ ಲೇಖನ ಪ್ರಕಟಗೊಂಡಿದ್ದನ್ನು ಓದಿ ನನಗೆ ಬಹಳೇ ಆನಂದವಾಯಿತು ಸಾಧನೆ ಎಂಬ ಗುರಿಯಿಂದ ಎಲ್ಲವನ್ನು ಎದುರಿಸುವ ಶಕ್ತಿ ಅದರಲ್ಲಡಗಿದೆ ಇಂಜನೀಯರಂಗ್ ಮಾಡಿರುವ ವಿದ್ಯಾರ್ಥಿಗಳು ಸ್ಪೂರ್ತಿಯತ್ತ ಸಾಗಿರುವುದು ಸಾಧನೆಯ ಗರಿಯಾಗಿದೆ ಎಂದು ಹೇಳಿದ ಅವರು ಪ್ರವೀಣ್ ಅವರ ಮಾತಾಪಿತರು ಆದರ್ಶ ಮಕ್ಕಳನ್ನು ಪಡೆದಿದ್ದಾರೆ ಹಡಪದ ಅಪ್ಪಣ್ಣ ಎಂಬ ಶರಣರ ಸಂಸ್ಕಾರವನ್ನು ಇವತ್ತಿಗೂ ರೂಢಿಸಿಕೊಂಡು ಬಂದವರಾಗಿದ್ದಾರೆಂದು ಡಾ. ಪ್ರವೀಣ್ ಅವರ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ದಿವ್ಯ ಸಾನಿಧ್ಯ ವಹಿಸಿದ ಕೈಲಾಸಪೇಠೆಯ ಶ್ರೀ ಬಸವಪ್ರಭುದೇವರು ಮಾತನಾಡಿ ಯಾವದೇ ಗೆಲುವಿಗೆ ಕೇವಲ ಪ್ರಯತ್ನವೆಂಬುದು ಸಾಲದು ಅದರೊಂದಿಗೆ ದೈವಬಲವೆಂಬುದು ಬರಬೇಕು ಅದರೊಂದಿಗೆ ಸತ್ಯವಾದ ಶುದ್ದವಾದಕಾಯಕದೊಂದಿಗೆ ನಡೆಯುವ ಕಾರ್ಯವಾಗಬೇಕು ಅಂತಹ ಕಾರ್ಯ ಪ್ರವೀಣ್ ಅವರು ಹಾಗೂ ಅವರ ತಂದೆ ಸಂಗಣ್ಣ ಸರ್ ಅವರು ಮಾಡಿದ್ದಾರೆ ಕೇವಲ ಅವರ ಮಾತಾಪಿತರಷ್ಟೇ ಅಲ್ಲ ಅವರ ಸಹೋದರ ಸಹೋದರಿಯರ ಹಾಗೂ ಅವರ ಧರ್ಮಪತ್ನೀಯ ಸಹಕಾರವೂ ಅದರಲ್ಲಡಗಿದೆ ಎಂದರು.
ಡಾಕ್ಟರೇಟ್ ಪದವಿ ಪಡೆದ ಪ್ರವೀಣ್ ಸಿಂದಗಿ ಹಾಗೂ ಅವರ ತಂದೆ ಸಂಗಣ್ಣ ಸರ್ ತಾವು ಸಾಧನೆಗೈದಿದ್ದರ ಕುರಿತು ಮಾತನಾಡಿದರು.
ಇದೇ ಸಮಯದಲ್ಲಿ ಡಾ. ಪ್ರವೀಣ್ ಸಿಂದಗಿ ಅವರ ಅಸಂಖ್ಯಾತ ಗೆಳೆಯರ ಬಳಗ ಹಾಗೂ ಹಡಪದ ಅಪ್ಪಣ್ಣ ಸಮಾಜ ಬಾಂಧವರ ವತಿಯಿಂದ ಪ್ರವೀಣ್ ದಂಪತಿಗಳಿಗೆ ಹಾಗೂ ಅವರ ಮಾತಾಪಿತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಡಿ.ವ್ಹಿ. ಕುಂಟೋಜಿ, ಹಡಪದ ಸಮಾಜದ ಅಧ್ಯಕ್ಷ ಸುನೀಲ್ ಹಡಪದ, ಪ್ರಭು ತುಂಬಗಿ ಉಪಸ್ತಿತರಿದ್ದರು.
ಈ ಸಮಯದಲ್ಲಿ ಎಂ.ಸಿ. ಹಡಪದ (ಮಿಣಜಗಿ), ಎನ್ ಜಿ ಓ ಅಮರೇಶ ದೇಸಾಯಿ, ಬಸವರಾಜ ಹೆಗರೆಡ್ಡಿ, ಪರಮಣ್ಣ ಹಡಪದ, ಶಾಂತಣ್ಣ ಹಡಪದ, ವೀರಭದ್ರ ಹಡಪದ, ಭೀಮಣ್ಣ ಸಾಸನೂರ, ಮಲ್ಲಣ್ಣ ಹಡಪದ, ಸುನೀಲ್ ಉಕನಾಳ, ಬಸವರಾಜ ಉಕನಾಳ, ಎ.ಎಸ್. ಇಟಗಿ(ಶಿಕ್ಷಕ), ಸಿ.ಎಸ್. ಯರಗಲ್ (ಶಿಕ್ಷಕ) ಹಾಗೂ ಶಿಕ್ಷಕ ಬಳಗದವರುಉಪಸ್ತಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಸಂಗೀತಗಾರರಾದ ಗೋವಿಂದಸಿಂಗ್ ಹಜೇರಿ, ಹಾಗೂ ಮಲ್ಲಿಕಾರ್ಜುನ ನಾವಿ ಸಂಗೀತ ಸೇವೆ ಸಲ್ಲಿಸಿದರು.
ಶಿಕ್ಷಕ ಅಶೋಕ ಪತ್ತಾರ ಸ್ವಾಗತಿಸಿದರು. ಶಿಕ್ಷಕ ಸಿದ್ದು ಕರಡಿ ನಿರೂಪಿಸಿ ವಂದಿಸಿದರು.