ಕೆಎಸ್‍ಆರ್‍ಪಿ ಸಿಬ್ಬಂದಿ ವಿರುದ್ಧ ಎಫ್‍ಐಆರ್
ಕಲಬುರಗಿ,ಅ.1: ಚಿಂಚೋಳಿ ತಾಲೂಕಿನ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ,ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ರಾಜ್ಯ ಮೀಸಲು ಪಡೆಯ ( ಕೆಎಸ್‍ಆರ್‍ಪಿ ) ಸಿಬ್ಬಂದಿ ಯಲ್ಲಾಲಿಂಗ ಮೇತ್ರಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈದರಾಬಾದಿನಲ್ಲಿದ್ದ ಯುವತಿಯು ಸಾಮಾಜಿಕ ಜಾಲತಾಣದ ಮೂಲಕ ಯಲ್ಲಾಲಿಂಗರಿಗೆ ಪರಿಚಯವಾದರು.ಹಲವು ದಿನ ಇಬ್ಬರೂ ಫೋನ್‍ನಲ್ಲಿ ಮಾತನಾಡಿದ್ದರು.ಮದುವೆ ಆಗುವದಾಗಿ ನಂಬಿಸಿದ ಯಲ್ಲಾಲಿಂಗ ಆಗಸ್ಟ್ 13 ರಂದು ಯುವತಿಯನ್ನು ಕಲಬುರಗಿಗೆ ಕರೆಸಿಕೊಂಡರು. ನಗರದ ಲಾಜ್ಡ್‍ವೊಂದರಲ್ಲಿ ಇರಿಸಿ,ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.