ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ
ಚಿಟಗುಪ್ಪಾ.ಅ.1:ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸರಬರಾಜಾದ ಪಡಿತರ ಅಕ್ಕಿಯನ್ನು ಪಡಿತರ ಚೀಟಿದಾರರಿಂದ ಕಡಿಮೆ ಬೆಲೆಗೆ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪಕ್ಕದ ತೆಲಂಗಾಣ ರಾಜ್ಯದ ಜಹರಾಬಾದಿಗೆ ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಆಹಾರ ಇಲಾಖೆ, ಪೆÇಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪಡಿತರ ಅಕ್ಕಿ ಹಾಗೂ ಅಕ್ಕಿಯನ್ನು ಸಾಗಿಸಲು ಬಳಸಿದ್ದ ಪಿಕಪ್ ವಾಹನವನ್ನು ಜಪ್ತಿ ಮಾಡಿಕೊಂಡಿರುವ ಘಟನೆ ತಾಲೂಕಿನ ಬೆಮಳಖೇಡಾ ಪೆÇಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 65ರ ಮರಕುಂದ ಗ್ರಾಮದ ಬಳಿಯ ಮೇಲ್ಸೇತುವೆಯ ಬಳಿ ಜರುಗಿದೆ.
ಒಟ್ಟು 19 ಕ್ವಿಂಟಲ್ 69ಕೆಜಿ ಪಡಿತರ ಅಕ್ಕಿ( ಅಂದಾಜು ಮೌಲ್ಯ 68,127) ವಶಪಡಿಸಿಕೊಂಡು ಕೃತ್ಯಕ್ಕೆ ಬಳಸಿದ ಬೋಲೆರೋ ಪಿಕಪ್ ವಾಹನ ( ಅಂದಾಜು ಮೌಲ್ಯ10ಲಕ್ಷ ) ಜಪ್ತಿ ಮಾಡಿಕೊಳ್ಳಲಾಗಿದೆ
ಆಹಾರ ನಿರೀಕ್ಷಕ ಅರುಣಕುಮಾರ್ ನೀಡಿದ ದೂರಿನಂತೆ ಪಿಕಪ್ ವಾಹನ ಚಾಲಕ ತಾಲೂಕಿನ ಮನ್ನಾಎಖೇಳಿ ಗ್ರಾಮದ ಮೊಹಮ್ಮದ್ ಅಜರೋದ್ದಿನ್ ಬಾಗವಾನ್ ಹಾಗೂ ಅಕ್ರಮವಾಗಿ ಪಡಿತರ ಅಕ್ಕಿ ಖರೀದಿಸುತ್ತಿದ್ದ ಆರೋಪದಡಿಯಲ್ಲಿ ತೆಲಂಗಾಣ ರಾಜ್ಯದ ಜಹಿರಾಬಾದ್ ನ ವೈಜನಾಥ್ ದೌಲಪ್ಪ ಇಬ್ಬರ ವಿರುದ್ಧ ಬೆಮಳಖೇಡಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.