ಸರ್ವಜ್ಞ ,ಜಸ್ಟಿಸ್ ಶಿವರಾಜ ಪಾಟೀಲ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ
ಕಲಬುರಗಿ,ಅ.1: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಕಲಬುರಗಿಯಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು
ಧಾರವಾಡದ ಸ್ಮೈಲ್‍ಗ್ಲೋಬಲ್ ಟೀಚರ್ಸ್ ಅಕಾಡೆಮಿ ಸಂಸ್ಥಾಪಕ ಮಹೇಶ್ ಮಾಶಾಳ ಅವರು ಉದ್ಘಾಟಿಸಿದರು. ನಂತರ ಅವರು ಮಾತನಾಡುತ್ತ ದೇವರು ಸೃಷ್ಟಿಸಿದ ಪ್ರಕೃತಿಯಲ್ಲಿ ಎಲ್ಲದರಲ್ಲಿಯೂ ಒಂದು ಶಕ್ತಿ ಇದೆ. ವಿದ್ಯಾರ್ಥಿಗಳು ತಮ್ಮ ಒಳಗಿನ ಶಕ್ತಿಯನ್ನುಅರಿತುಕೊಂಡು ಅದರ ಪ್ರಯೋಜನ ಪಡೆದುಕೊಳ್ಳಬೇಕು.ತನ್ನ ಬಗ್ಗೆ ಹೆಮ್ಮೆಯಿಂದಿದ್ದು ಬಾಳಬೇಕು. ಪಾಲಕರ ಬಗ್ಗೆ ಪ್ರೀತಿಅಭಿಯಾನ ಹೊಂದಿರಬೇಕು. ಅವರು ನೀಡಿದ ಹಣ, ಸಮಯ,ಸ್ವಾತಂತ್ರ್ಯದ ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಕರಮಾರ್ಗದರ್ಶನ ಪಡೆದು ಕೇವಲ ಪುಸ್ತಕ ಪಠ್ಯ, ಪರೀಕ್ಷೆ,ಅಂಕಕ್ಕೆ ಮಾತ್ರ ಸೀಮಿತವಾಗಿರದೆ ಪ್ರಪಂಚದ ಜ್ಞಾನ ಪಡೆದುಸುಸಂಸ್ಕøತ ನಾಗರಿಕನಾಗಿ ಬಾಳಬೇಕು. ನಿಮ್ಮಲ್ಲಿ ಇರುವ ಶಕ್ತಿ,ಸಾಮಥ್ರ್ಯವನ್ನು ಹುಡುಕುವುದೇ ಶಿಕ್ಷಣ.ವಿದ್ಯಾರ್ಥಿ ಜೀವನದಲ್ಲಿ ಅದನ್ನು ಉತ್ತಮವಾಗಿಪಡೆದುಕೊಳ್ಳಬೇಕು. ಮಕ್ಕಳು ಎಲ್ಲವನ್ನು ಪ್ರಶ್ನಿಸಿ ಉತ್ತರಕಂಡುಕೊಳ್ಳಬೇಕು. ನೋಡುವ ದೃಷ್ಠಿ ಚೆನ್ನಾಗಿದ್ದರು.ಸೃಷ್ಠಿ ಸುಂದರವಾಗಿಯೇ ಕಾಣುತ್ತದೆ. ಮನುಷ್ಯನಿಗೆ ಬುದ್ದಿಶಕ್ತಿದೇವರು ಕೊಟ್ಟ ಬಹುದೊಡ್ಡ ಕೊಡುಗೆ ಅದನ್ನುಅರಿತಿರಬೇಕು. ಜಗತ್ತಿನಲ್ಲಿ ಎಲ್ಲವೂ ಇದೆ. ಉತ್ತಮವಾದದನ್ನು ಆರಿಸಿಕೊಂಡು ಆ ನಿಟ್ಟಿನಲ್ಲಿಸಾಧನೆ ಮಾಡಬೇಕೆಂದು ಪ್ರೋತ್ಸಾಹಿಸಿದರು.
ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ, ಎಸ್.ಎಸ್.ಹಿರೇಮಠ, ಪ್ರಭುಗೌಡ ಸಿದ್ಧಾರೆಡ್ಡಿ,ಪ್ರಶಾಂತ ಕುಲಕರ್ಣಿ, ವಿನುತಾ ಆರ್.ಬಿ., ಕರುಣೇಶ್‍ಹಿರೇಮಠ, ಗುರುರಾಜ ಕುಲಕರ್ಣಿ, ಉಪನ್ಯಾಸಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೀರಶ್ರೀ ಪ್ರಾರ್ಥಿಸಿದರು. ಡಾ.
ವಿದ್ಯಾವತಿ ಪಾಟೀಲ ನಿರೂಪಿಸಿದರು.