ಲಕ್ಷಕ್ಕಿಂತ ಅಧಿಕ ಸದಸ್ಯರ ಗುರಿ
ಕೆಆರ್ ಪುರ , ಅ.೬- ಕೆಆರ್ ಪುರ ಕ್ಷೇತ್ರದಲ್ಲಿ ಒಂದುಲಕ್ಷಕ್ಕಿಂತ ಹೆಚ್ಚು ಸದಸ್ಯತ್ವ ಮಾಡುವ ಗುರಿ ಹೊಂದಿದ್ದೇವೆ ಎಂದು ಶಾಸಕ ಬಿ.ಎ. ಬಸವರಾಜ ಅವರು ತಿಳಿಸಿದರು.
ಕೆಆರ್ ಪುರದಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದ ಎರಡನೇ ಹಂತದ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಐವತ್ತು ಸಾವಿರ ಸದಸ್ಯತ್ವ ಮಾಡಿದ್ದು ಉಳಿದ ದಿನಗಳಲ್ಲಿ ಇನ್ನೂ ಐವತ್ತು ಸಾವಿರ ಸದಸ್ಯತ್ವ ಮಾಡುವ ಗುರಿಯನ್ನು ಕಾರ್ಯಕರ್ತರು, ಮುಖಂಡರು ಇಟ್ಟುಕೊಂಡು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಹಬ್ಬಗಳ ನಡುವೆ ಪಕ್ಷದ ಕಡೆಸಹ ಗಮನ ನೀಡಬೇಕು, ಸದಸ್ಯತ್ವ ಹೆಚ್ಚು ಮಾಡುವ ಮೂಲಕ ಕೆಆರ್ ಪುರದ ಶಕ್ತಿ ತೋರಿಸಬೇಕಿದೆ ಎಂದು ಹೇಳಿದರು.ಪಕ್ಷದ ಸಂಘಟನೆ ಕಡೆ ಕಾರ್ಯಕರ್ತರು ಒಟ್ಟುಗೂಡಿಸಿ ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಮುಂದೆ ಬರುವ ಎಲ್ಲಾ ಚುನಾವಣೆಗಳಿಗೆ ಪಕ್ಷದ ಸದಸ್ಯತ್ವ ಹೆಚ್ಚು ಮಾಡಿದವರನ್ನು ಪಕ್ಷ ಗುರುತಿಸಲಿದೆ, ಜವಾಬ್ದಾರಿಯಿಂದ ಪಕ್ಷದ ಸದಸ್ಯತ್ವ ಮಾಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ, ಪಾಲಿಕೆ ಮಾಜಿ ಸದಸ್ಯರಾದ ಸುಗುಮಾರ್, ಆಂತೋಣಿಸ್ವಾಮಿ, ಮಂಜುಳಾದೇವಿ,ಕ್ಷೇತ್ರದ ಮಹಿಳಾ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಗಂಗಾಧರ್ , ಪ್ರಧಾನ ಕಾರ್ಯದರ್ಶಿ ಶ್ರೀರಾಮ್, ವಾರ್ಡ್ ಅಧ್ಯಕ್ಷ ಗೋಪಾಲ್,ಮಾಜಿ ಅಧ್ಯಕ್ಷ ರಮೇಶ್ ಗೌಡ ಇದ್ದರು