ಪ್ಯಾಲಿಸ್ತೀನ್ ಮೇಲೆ ಪ್ರೀತಿ: ಹೆಸರು ಬದಲಿಸಿದ ಬಸ್ ಮಾಲೀಕ
ಮಂಗಳೂರು.ಅ.೬-ರಾಜ್ಯದಲ್ಲಿ ಇತ್ತೀಚೆಗಷ್ಟೆ ಪ್ಯಾಲೆಸ್ತೀನ್ ಪರ ಕೆಲ ಯುವಕರ ಗುಂಪು ಬಾವುಟ ಪ್ರದರ್ಶನ ಮಾಡಿದ್ದರು. ಇದೀಗ ಮಂಗಳೂರಿನಲ್ಲಿ ಪ್ಯಾಲೆಸ್ತೀನ್ ಪರ ಒಲವು ಹೆಚ್ಚಾಗಿದೆ. ಪ್ಯಾಲೆಸ್ತೀನ್ ಬೆಂಬಲಿಗರ ಆಕ್ರೋಶದ ಹಿನ್ನೆಲೆ ಮಂಗಳೂರಿನ ಖಾಸಗಿ ಬಸ್ ಮಾಲೀಕ ಇಸ್ರೇಲ್ ಟ್ರಾವೆಲ್ಸ್ ಎಂದು ತನ್ನ ಬಸ್ ಹೆಸರನ್ನೇ ಬದಲಿಸಿದ್ದಾರೆ. ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಹೆಚ್ಚುತ್ತಿದೆ.
ಇಸ್ರೇಲ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಬಸ್ ಮಾಲೀಕ ಲೆಸ್ಟರ್, ಕಳೆದ ೧೨ ವರ್ಷಗಳಿಂದ ಇಸ್ರೇಲ್ನಲ್ಲಿ ಉದ್ಯೋಗ ನಿಮಿತ್ತ ಕುಟುಂಬದೊಂದಿಗೆ ನೆಲೆಸಿದ್ದಾರೆ. ಬಸ್ ಮಾಲೀಕನ ಇಸ್ರೇಲ್ ಅಭಿಮಾನಕ್ಕೆ ಪ್ಯಾಲೆಸ್ತೀನ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ಗೆ ಇಸ್ರೇಲ್ ಹೆಸರು ಇಟ್ಟಿದ್ದನ್ನು ಸಹಿಸದ ಪ್ಯಾಲೆಸ್ತೀನ್ ಬೆಂಬಲಿಗರು. ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ಸಿನ ಹೆಸರು ಬದಲಿಸದಿದ್ದರೆ ಸೀಜ್ ಮಾಡಿಸುತ್ತೇವೆ ಎಂದು ಪೊಲೀಸರ ಬೆದರಿಕೆ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಇಸ್ರೇಲ್ ಹೆಸರು ಬದಲಿಸಿ ಜೆರುಸಲೇಂ ಟ್ರಾವೆಲ್ಸ್ ಎಂದು ಹೆಸರು ಬದಲಾಯಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಈದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಕೆಲ ಯುವಕರ ಗುಂಪು ಬಾವುಟ ಪ್ರದರ್ಶನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಕೋಲಾರ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು. ಕೋಲಾರ ನಗರದ ಆರೀಪ್ ಪಾಷಾ, ಸಯ್ಯದ್ ಸಾಭೀರ್, ಮೊಹಮದ್ ಸಾದ್, ಹಯಾಜ್ ಪಾಷಾ ಬಂಧಿತರು.