ಸಿಎಂ ಬಗ್ಗೆ ಸೋಮಣ್ಣ ಮೃದುಧೋರಣೆ
ಬಳ್ಳಾರಿ,ಅ,೬- ಮೂಡಾ ಹಗರಣ ಸಂಬಂಧ ಪದೇ ಪದೇ ಮಾತನಾಡುವುದು ಬೇಡ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ
ಕಾನೂನಿದೆ, ಅದರ ಪಾಡಿಗೆ ಅದು ತನಿಖೆ ಮಾಡುತ್ತೆ. ಮೂಡಾ ಬಗ್ಗೆ ಎಷ್ಟು ಮಾತನಾಡಿದರು ಅಷ್ಟೃ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಪಡೆಯುವುದು ಅವರ ಪಕ್ಷಕ್ಕೆ ಬಿಟ್ಟ ವಿಷಯ ಎಂದು ತಿಳಿಸಿದ್ದಾರೆ
ಬಳ್ಳಾರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ನಾವು ಯಾರೂ ಸಿದ್ದರಾಮಯ್ಯ ಪತ್ನಿ ಬಗ್ಗೆ ಮಾತನಾಡಿಲ್ಲ. ಆ ಬಗ್ಗೆ ಊಹೆಯನ್ನೂ ಮಾಡಬೇಡಿ, ಅವರ ಬಗ್ಗೆ ನಮಗೆ ಗೌರವ ಇದೆ ಎಂದಿದ್ದಾರೆ
ಮೂಡ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ಏನು ಮಾಡ್ತದೆ ಅನ್ನೋದು ಅವರ ಪಕ್ಷಕ್ಕೆ ಬಿಟ್ಟಿದೆ. ಈ ಬಗ್ಗೆ ಪದೇ ಪದೇ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ
ಬಿಜೆಪಿಯಲ್ಲಿ ಅಸಮಾಧಾನ;
ಬಳ್ಳಾರಿಯಲ್ಲಿ ರೆಡ್ಡಿ ಸಹೊದರರ ಮುನಿಸು ಹಾಗೂ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು ರೆಡ್ಡಿ ಸಹೋದರರು, ಶ್ರೀರಾಮುಲು ಬೇರೆ ಬೇರೆಯಾದಾಗ ಏನಾಯಿತು, ಎಲ್ಲರಿಗೂ ಈಗ ಗೊತ್ತಾಗಿದೆಸದ್ಯ ಬಳ್ಳಾರಿ ಬಿಜೆಪಿ ಸ್ಥಿತಿ ಎಲ್ಲ ನಾಯಕರಿಗೆ ಗೊತ್ತಾಗಿದೆ ಎಂದಿದ್ಧಾರೆ
ಈಗ ಎಲ್ಲರೂ ಒಂದಾಗುವ ಸಮಯ ಮತ್ತೆ ಬಂದಿದೆ. ಎಲ್ಲರೂ ಒಂದಾಗ್ತಾರೆ.ಶ್ರೀರಾಮುಲುಗೆ ಸ್ವಲ್ಪ ಆರಂಭದಲ್ಲಿ ಮುಂಗೋಪು ಅಷ್ಟೇ .ಸ್ವಲ್ಪ ದಿನ ಕಾದು ನೋಡಿ ಎಲ್ಲರು ಹೇಗೆ ಒಗ್ಗಾಟ್ಟಾಗ್ತಾರೆ.ಬಳ್ಳಾರಿ ಅಷ್ಟೇ ಅಲ್ಲ, ರಾಜ್ಯ ಬಿಜೆಪಿಯಲ್ಲೂ ಯಾವ ಸಮಸ್ಯೆ ಇಲ್ಲ ಎಂದಿದ್ದಾರೆ
ಡಿಸೆಂಬರ್ ನಂತರ ಪಕ್ಷ ಹಳೇ ಮಾದರಿಯಲ್ಲಿ ಮತ್ತೊಮ್ಮೆ ಗಟ್ಟಿಯಾಗ್ತದೆರೆಡ್ಡಿ ಸಹೋದರರನ್ನು ಒಂದಾಗಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ