ಸಂತ್ರಸ್ತರ ಸಂಕಟ ನಿವಾರಣೆಗೆ ಅಲೈನ್ಸ್ ಕ್ಲಬ್ ಸದಾ ಸಿದ್ಧ: ಸಿ.ಬಾಲಚಂದ್ರನ್
ಬೀದರ್:ಆ.19: ದೇಶದ ಯಾವುದೇ ಮೂಲೆಯಲ್ಲಿ ಸಂಭವಿಸಬಹುದಾದ ಅನುಹುತಗಳಿಂದ ಸಂತ್ರಸ್ತಕ್ಕೆ ಒಳಗಾಗುವವರಿಗೆ ಅಲೈನ್ಸ್ ಕ್ಲಬ್ ಸದಾ ಸಹಾಯ ಹಸ್ತ ಚಾಚುತ್ತಿದೆ ಎಂದು ಅಲೈನ್ಸ್ ಕ್ಲಬ್‍ನ ಅಂತರಾಷ್ಟ್ರೀಯ ಅಧ್ಯಕ್ಷರಾದ ಬಾಲಚಂದ್ರನ್ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಇತ್ತಿಚೀಗೆ ಉತ್ತರ ಕನ್ನಡ ಜಿಲ್ಲೆಯ ಅಂಕೊಲಾ ತಾಲೂಕಿನ ಶಿರೂರದಲ್ಲಿ ಗುಡ್ಡ ಕುಸಿತದಿಂದ ಹಲವಾರು ಜನರು ಪ್ರಾಣ ಕಳೆದುಕೊಂಡು ನುರಾರು ಜನರು ಆಶ್ರಯ ಕಳೆದುಕೊಂಡಿದ್ದರು. ಅವರೆಲ್ಲರಿಗೆ ಅಲೈನ್ಸ್ ಕ್ಲಬ್ ಮುಖೇನ ಕಾರವಾರ, ವಿಜಯಪುರ ಸೇರಿದಂತೆ ವಿವಿಧ ಕಡೆಗಳಿಂದ ಹಣ ಸಂಗ್ರಹಿಸಿ ಬಟ್ಟೆ, ಪಾತ್ರೆ, ಹೊದಿಕೆ ಸೇರಿದಂತೆ ಇತರೆ ವಸ್ತುಗಳನ್ನು ನೀಡಿ ಸಹಾಯ ಮಾಡಲಾಯಿತೆಂದು ವಿವರಿಸಿದರು.
ಅಲೈನ್ಸ್ ಕ್ಲ;ಬ್ ಇದು ಭಾರತದಲ್ಲಿಯೇ ಹುಟ್ಟಿ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ, ನೇಪಾಳ, ಭೂತಾನ, ಮಲೆಷಿಯಾ ಸೇರಿದಂತೆ ಜಗತ್ತಿನ 22 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಈಗಾಗಲೇ ಸುಮಾರು 25 ಲಕ್ಷ ಸದಸ್ಯರನ್ನು ಹೊಂದಿದ್ದು, ಸ್ವತಃ ಸದಸ್ಯರು ಸಂಗ್ರಹಿಸಿದ ಹಣದಿಂದ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 16 ವರ್ಷಗಳ ಹಿಂದೆ ಈ ಸಂಸ್ಥೆ ಹುಟ್ಟು ಹಾಕಲಾಗಿ ಈಗ ಅದು ಹೆಮ್ಮರವಾಗಿ ಬೆಳೆದು ನಿಂತಿದೆ. ಬೀದರ್‍ನಲ್ಲಿ ನೂತನ ಗವರ್ನರ್ ಡಾ.ಶರಣಯ್ಯ ಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರ ಹಾಗೂ ಇತರೆ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮ ಆಯೋಜಿಸಲಾಗಿತ್ತೆಂದು ಹೇಳಿದರು.
ಕಲ್ಕತ್ತಾ, ದೇಹಲಿ, ನೊಯಿಡಾಗಳಲ್ಲಿ ಸ್ವಂತದ ಕಟ್ಟಡಗಳನ್ನು ಹೊಂದಿರುವ ಈ ಸಂಸ್ಥೆ ಅತ್ಯಂತ ಕಡಿಮೆ ಸಮಯದಲ್ಲಿ ಭಾರತ ಸೇರಿದಂತೆ ಜಗತ್ತಿನ ಎಲ್ಲ ದೇಶಗಳ ಆಯಾ ಜಿಲ್ಲೆಗಳಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಬೃಹತ್ತಾದ ಸಂಸ್ಥೆ ಇದಾಗಿದೆ. ಬೀದರ್‍ನಲ್ಲಿ ಈ ಸಂಸ್ಥೆ ಆರಂಭವಾಗಿ 3 ವರ್ಷಗಳಾಯಿತು. ಇಲ್ಲಿಯ ವರೆಗೆ ಬೀದರ್‍ನಲ್ಲಿ 106 ಸದಸ್ಯರಿದ್ದಾರೆ ಎಂದರು.
ಹಸಿವು ಮುಕ್ತ ದೇಶವನ್ನಾಗಿಸುವ ಜವಾಬ್ದಾರಿ ಹೊಂದಿರುವ ಅಂತರಾಷ್ಟ್ರೀಯ ನಿರ್ದೇಶಕರಾದ ಬಸವರಾಜ ಹೇಡೆ ಮಾತನಾಡಿ, ತಾನು ಎರಡು ಬಾರಿ ಜಿಲ್ಲಾ ಗವರ್ನರ್(ಅಧ್ಯಕ್ಷ) ಆಗಿ ಕೆಲಸ ಮಾಡಿದ್ದು, ನನ್ನ ಅವಧಿಯಲ್ಲಿ ಸಾರ್ವಜನಿಕರಿಗೆ ರಕ್ತದಾನ ಶಿಬಿರ, ಕಣ್ಣಿನ ಶಿಬಿರ, ಇತ್ತಿಚೀಗೆ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಲಲಾಗಿದೆ. ಈಲ್ಲೆಯ ಎಸ್.ಎಸ್.ಎಲ್.ಸಿ ಪರಿಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೋಟ್ಸ್ ಕೊಡಲಾಗಿತ್ತು. ಇಂಜಿನಿಯರಿಂಗ್, ಐ.ಟಿ.ಐ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರಿಕ್ಷೆಗಾಗಿ ಕಿಟ್‍ಗಳು ವಿತರಿಸಲಾಗಿದೆ. ಶನಿವಾರ ಇಲ್ಲಿಯ ಎರಡು ಬುದ್ದಿಮಾಂಧ್ಯ ಶಾಲೆ ಮಕ್ಕಳಿಗೆ ಟಿ ಶರ್ಟ್‍ಗಳನ್ನು ವಿತರಿಸಲಾಯಿತು. ಇಲ್ಲಿ ಗವರ್ನರ್ ಆಗಿ ಶರಣಯ್ಯ ಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಗಿದೆ. ಉಪಾಧ್ಯಕ್ಷರಾಗಿ ಅನಿಲ ರಾಯಪಳ್ಳಿ ಹಾಗೂ ದಿಲೀಪ ಕಮಠಾಣೆ, ಕಾರ್ಯದರ್ಶಿಯಾಗಿ ಬಾಬುರಾವ ದಾನಿ, ಖಜಾಂಚಿಯಾಗಿ ಬಸವರಾಜ ಹೊಸಮನಿ, ಪಿ.ಆರ್.ಒ ಆಗಿ ರಮೇಶ ಪಾಟೀಲ ಅವರನ್ನು ನೇಮಕ ಮಾಡಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತೆಂದು ಹೇಳಿದರು.
ಅಲೈನ್ಸ್ ಕ್ಲಬ್ ಅಂತರಾಷ್ಟ್ರೀಯ ಉಪಾಧ್ಯಕ್ಷರಾದ ಡಿ.ಬಿ.ಜಿ ಶಾಸ್ತ್ರಿ, ನಿರ್ದೇಶಕರಾದ ಬೊಜ್ಯ ಮಧುಸುಧನ್, ನವೀನಾ ಶಟ್ಟಿಗಾರ, ಎಸ್.ಎಮ್.ಸಿ ಅಧ್ಯಕ್ಷ ರಾಜೇಂದ್ರನ್, ಐ.ಸಿ.ಸಿ ಅಧ್ಯಕ್ಷ ದಿನಕರ್ ಶೆಟ್ಟಿ, ನಿವೃತ್ತ ಪಿ.ಎಸ್.ಐ ಮಾಧಪ್ಪ ಪಿಳೈ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.