ಗುತ್ತಿ ಬಸವಣ್ಣ ಕಾಲುವೆ ಸ್ವಚ್ಛ ಮಾಡಿದ ರೈತರು
ಇಂಡಿ:ಆ.19: ತಾಲೂಕಿನ ಚವಡಿಹಾಳ, ಚೋರಗಿ,ಬೂದಿಹಾಳ, ಅಂಜುಟಗಿ ಮತ್ತು ಚಿಕ್ಕಬೇವನೂರ ಗ್ರಾಮಸ್ಥರು ಇಂದು ಬೆಳಗ್ಗೆ ಕಾಲುವೆ ಸ್ವಚ್ಛ ಗೊಳಿಸುವ ಕಾರ್ಯ ಕೈಕೊಂಡರು.
ಕಾಲುವೆಯಲ್ಲಿ ಮಣ್ಣು ತುಂಬಿ ಅಂತಹ ಪ್ರದೇಶಗಳಿಂದ ನೀರು ಮುಂದೆ ಹೋಗುತ್ತಿರಲಿಲ್ಲ. ಮತ್ತು ಅಲ್ಲಲ್ಲಿ ಮುಳ್ಳು ಕಂಟಿ,ಗಿಡಗಳು ಬೆಳೆದು ನೀರು ಸರಾಗವಾಗಿ ಹೋಗಲು ಆಗದೇ ನೀರು ಬೇರೆ ಕಡೆ ಪೋಲಾಗುತ್ತಿತ್ತು.
ಇದನ್ನು ಗಮಿನಿಸಿ ರೈತರು ಎಲ್ಲೆಲ್ಲಿ ಮಣ್ಣು ತುಂಬಿದೆ ಆ ಕಾಲುವೆಗಳಲ್ಲಿಯ ಮಣ್ಣು ತೆಗೆದರು.
ಇದಕ್ಕೆ ರೈತರು ತಾವೇ ಹಣ ಸಂಹಗ್ರಹಿಸಿ ಜೆಸಿಪಿ ಉಪಯೋಗಿಸಿ ಮಣ್ಣು ತೆಗೆದರು.
ಮತ್ತು ನೂರಾರು ರೈತರು ತಾವು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಈಗ ಈ ಗ್ರಾಮದ ಹೊಲಗಳಿಗೆ ಗುತ್ತಿ ಬಸವಣ್ಣ ಕಾಲುವೆ ನೀರು ಸರಾಗವಾಗಿ ಹರಿಯುತ್ತಿದೆ.
ಈ ಕಾರ್ಯದಲ್ಲಿ ಅಶೋಕ ಪಿರಗೌಡ,ನಾಗೇಂದ್ರ ವಾಲಿಕಾರ, ಮಾಳಪ್ಪ ಹೂಗಾರ, ಬಸವರಾಜ ತವಡಿ, ಮಾಳಪ್ಪ ಕವಡಿ, ಸುರೇಶ ಭೈರುಣಗಿ,ದೇವೆಂದ್ರ ಪೂಜಾರಿ,ರಮೇಶ ಭೈರುಣಗಿ,ಸುಭಾಸ ಹೂಗಾರ, ಭೀಮಾಶಂಕರ ಈರಕಾರ, ಪ್ರಕಾಶ ಬಿರಾದಾರ, ಬಸವರಾಜ ಅಂಕಲಗಿ, ಸದಾನಂದ ವಾಲಿಕಾರ, ಬಸವರಾಜ ವಾಲಿಕಾರ ಮತ್ತಿತರಿದ್ದರು.