ಬಾದಾಮಿಯಲ್ಲಿ ರಾಯರ ಆರಾಧನೆ
ಬಾದಾಮಿ,ಆ.19: ಅ.20 ರಿಂದ 22 ರವರೆಗೆ ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 353 ನೇ ಆರಾಧನಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
20 ರಂದು ಪೂರ್ವಾರಾಧನೆ ನಿಮಿತ್ಯ ಬೆಳಿಗ್ಗೆ 9 ಗಂಟೆಗೆ ಪಾಲಕಿ ಉತ್ಸವ, ಗ್ರಾಮ ಪ್ರದಕ್ಷಣೆ, 21 ರಂದು ಮಧ್ಯಾರಾಧನೆ ವಿಶೇಷ ಅಲಂಕಾರ ಪೂಜೆ, 22 ರಂದು ಉತ್ತರಾರಾಧನೆ ಬೆಳಿಗ್ಗೆ 9.30 ಕ್ಕೆ ಮಹಾರಥೋತ್ಸವ ಹಾಗೂ ಸ್ವಸ್ಥಿವಾಚನಾದಿಗಳು ಜರುಗಲಿದೆ.
ನಿತ್ಯ ರಾಯರ ವೃಂದಾವನಕ್ಕೆ ಪಂಚಾಮೃತ, ಅಷ್ಟೋತ್ತರ, ಮಹಾಪೂಜೆ, ಸರ್ವಸೇವಾ, ಮಹಾ ನೈವೇದ್ಯ, ಅಲಂಕಾರ, ಹಸ್ತೋದಕ, ತೀರ್ಥ ಪ್ರಸಾದ, ಸಂಜೆ ವಾಣಿ ಭಜನಾ ಮಂಡಳಿಯಿಂದ ಭಜನೆ ಹಾಗೂ ಉಪನ್ಯಾಸ, ರಥೋತ್ಸವ, ಮಂಗಳಾರತಿ ಮತ್ತು ಸ್ವಸ್ಥಿವಾಚನಾದಿಗಳು ನಡೆಯಲಿವೆ.
23 ರಂದು ಸತ್ಯನಾರಾಯಣ ಪ್ರಜೆ, ಪವಮಾನ ಹೋಮ ಜರುಗಲಿದೆ. ಸೆ.13 ರಿಂದ 16 ವರೆಗೆ ಶ್ರೀ ಪ್ರಸನ್ನ ವೆಂಕಟದಾಸರ ಆರಾಧನೆ ಆಚರಿಸಲಾಗುತ್ತಿದ್ದು, ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷ ಕೆ.ವ್ಹಿ.ಕೆರೂರ, ಕಾರ್ಯದರ್ಶಿ ಅಡಿವೇಂದ್ರ ಇನಾಮದಾರ ಜಂಟಿಯಾಗಿ ಪ್ರಕಟಣೆಯಲ್ಲಿ ಕೊರಿದ್ದಾರೆ.