ಪ್ರಾಮಾಣಿಕತೆ ಮೆರೆದ ಕಂಡಕ್ಟರ್
ಔರಾದ: ಆ.19:ಹದಿನೈದು ಸಾವಿರ ರೂಪಾಯಿ ನಗದು ಹಣ ಸೇರಿದಂತೆ ಹತ್ತು ಗ್ರಾಂ. ಬಂಗಾರ ವಾಪಸ್ ವಾರಸುದಾರನಿಗೆ ನೀಡುವ ಮೂಲಕ ಔರಾದ ಬಸ್ ಘಟಕದ ಕಂಡಕ್ಟರ್ ಜಾಲಿಂದರ್ ಜಾಧವ ಅವರು ಮಾನವೀಯತೆ ಮೆರೆದಿದ್ದಾರೆ.
ಮಹಾರಾಷ್ಟ್ರದ ದೆಗಲೂರ್ ನಿಂದ ಹುಮನಾಬಾದ ಕಡೆ ಪ್ರಯಾಣಿಸುತ್ತಿದ್ದ ದೇವಿದಾಸ ದೇಶಮುಖ ಎನ್ನುವವರು ಮೂಲತ ನಾಂದೇಡ ಜಿಲ್ಲೆಯ ಬಿಲೋಲಿ ತಾಲೂಕಿನ ಸಗರೋಳಿ ಗ್ರಾಮದವರಾಗಿದ್ದು. ಅವರು ಬೀದರ ಜಿಲ್ಲೆಯ ಹುಮನಾಬಾದ ದೇವಸ್ಥಾನಕ್ಕೆ ತೆರಳುವಾಗ ಔರಾದ ಘಟಕದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಸುತ್ತಿರುವ ವ್ಯಕ್ತಿಯು ತನ್ನ ಬ್ಯಾಗ ಮರೆತು ಬಸ್ಸಿನಲ್ಲಿಯೆ ಬಿಟ್ಟು ಹೋಗಿದ್ದರು. ನಂತರ ಔರಾದ ಬಸ್ ನಿಲ್ದಾಣಕ್ಕೆ ಬಂದ ವ್ಯಕ್ತಿ ಕಂಡಕ್ಟರ್ ಅವರನ್ನು ವಿಚಾರಿಸಿದ ನಂತರ ನಗದು ಹಣ ಸೇರಿದಂತೆ ಬಂಗಾರ ಮರಳಿಸಿರುವುದಕ್ಕೆ ಬಸ್ ಕಂಡಕ್ಟರ್ ಮಾನವೀಯತೆಗೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ನನ್ನ ಬ್ಯಾಗ ನನಗೆ ಮರಳಿ ಸಿಗುವ ಭರವಸೆ ಇದ್ದಿಲ್ಲ ಆದರೆ ಮತ್ತೆ ಮರಳಿ ಸಿಕ್ಕಿದ್ದಕ್ಕೆ ಪ್ರಯಾಣಿಕ ಕ್ರತಜ್ಞತೆ ತಿಳಿಸಿದ್ದಾರೆ.