ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ
ಗುಳೇದಗುಡ್ಡ,ಆ.19: ಮಕ್ಕಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಸರ್ಧೆಯಲ್ಲಿ ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ರಾಜ್ಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಓದಿದ ಶಾಲೆಯ ಹೆಸರು ತರಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನವರ ಹೇಳಿದರು.
ಅವರು ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಾದಾಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸ್ಥಳೀಯ ಸಮೂಹ ಸಂಪನ್ಮೂಲ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ, ಶ್ರೀಮತಿ ಇಂದಿರಾಗಂಧಿ ವಸತಿ ಶಾಲೆಗಳ ಸಹಯೋಗದಲ್ಲಿ ಪಟ್ಟಣದ ಕಾಂಚನೇಶ್ವರಿ ಶಾಲಾ ಮೈದಾನದಲ್ಲಿ ನಡೆದ ಪ್ರಸಕ್ತ ಸಾಲಿನ ಗುಳೇದಗುಡ್ಡ ಪೂರ್ವ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕೇವಲ ಬೌದ್ಧಿಕ ಶಕ್ತಿ ಇದ್ದರೆ ಸಾಲದು, ಜತೆಗೆ ದೈಹಿಕ ಸಾಮಥ್ರ್ಯವು ಮುಖ್ಯ, ಕ್ರೀಡಾ ಚಟುಚಟಿಕೆಗಳಲ್ಲಿ ಭಾವಹಿಸುವುದರಿಂದ ದೈಹಿಕ ಹಾಗೂ ಬೌದ್ಧಿಕ ಶಕ್ತಿ, ಜೀವನದಲ್ಲಿ ಶಿಸ್ತು ಬೆಳೆಯುತ್ತವೆ ಎಂದರು.
ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯ ಆರ್.ಜೆ. ಪವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್‍ಪಿ ಎಸ್.ಎಸ್. ಯಲಿಗಾರ, ಬಿ.ಎಫ್ ಕುಂಬಾರ, ಸಿಆರ್‍ಪಿ ಜಗದೀಶ ಬುಳ್ಳಾ, ಭಾಗೀರಥಿ ಆಲೂರ, ಪುರಸಭೆ ಸದಸ್ಯ ರಾಜಶೇಖರ ಹೆಬ್ಬಳ್ಳಿ, ಎಂ.ಎಸ್. ಉಂಕಿ, ಎಸ್.ಟಿ. ರಂಜಣಗಿ, ಎಸ್.ಎಸ್. ಉಳ್ಳಾಗಡ್ಡಿ, ಡಿ.ಎಸ್. ನಿಲೂಗಲ್ಲ, ಟಿ.ವಿ. ಜಾಧವ್, ಎಚ್.ಬಿ. ನೂರಪ್ಪನವರ ಮತ್ತಿತರರು ಇದ್ದರು.